Select Your Language

Notifications

webdunia
webdunia
webdunia
webdunia

ಬೀದಿಯಲ್ಲಿ ಹುಡುಗಿಯರನ್ನ ರೇಗಿಸುವ ಮುನ್ನ ಎಚ್ಚರ..!

ಬೀದಿಯಲ್ಲಿ ಹುಡುಗಿಯರನ್ನ ರೇಗಿಸುವ ಮುನ್ನ ಎಚ್ಚರ..!
ಲಂಡನ್ , ಭಾನುವಾರ, 11 ಡಿಸೆಂಬರ್ 2022 (13:07 IST)
ಲಂಡನ್ : ಇನ್ಮುಂದೆ ಹಾದಿ-ಬೀದಿಗಳಲ್ಲಿ ಹುಡುಗಿಯರು, ಮಹಿಳೆಯರನ್ನ ರೇಗಿಸಿದ್ರೆ, ಅಣಕಿಸುವುದು, ರಸ್ತೆ ಅಡ್ಡಗಟ್ಟುವುದು ಅಥವಾ ಲೈಂಗಿಕ ಕಿರುಕುಳ ನೀಡಿದ್ರೆ 2 ವರ್ಷದ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಬ್ರಿಟನ್ ಗೃಹ ಸಚಿವಾಲಯ ಹೇಳಿದೆ.

ಮಹಿಳೆಯರು ಹಾಗೂ ಹುಡುಗಿಯರಿಗೆ ಕಿರಕುಳ ನೀಡುವುದು ಬೆಂಬಲಿತ ಯೋಜನೆಗಳ ಅಡಿಯಲ್ಲಿ ಅಪರಾಧವಾಗುತ್ತದೆ ಅಂತಹವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುವುದು.

ಪ್ರತಿಯೊಬ್ಬ ಮಹಿಳೆಯೂ ತಮ್ಮ ಬೀದಿಗಳಲ್ಲಿ ನಡೆಯಲು ಅವರಿಗೆ ಸುರಕ್ಷಿತವಾಗಿದೆ ಅನ್ನೋ ಭಾವನೆ ಬರಬೇಕು. ಅದಕ್ಕಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಗೃಹಚಿವಾಲಯದ ಸುಯೆಲ್ಲಾ ಬ್ರಾವರ್ಮನ್ ತಿಳಿಸಿದ್ದಾರೆ. 

ಲೈಂಗಿಕ ಕಿರುಕುಳವು ಈಗಾಗಲೇ ಕಾನೂನುಬಾಹಿರವಾಗಿದೆ. ಇದರ ಹೊರತಾಗಿಯೂ ಹಾದಿ, ಬೀದಿಗಳಲ್ಲಿ ಕಿರಕುಳ ನೀಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಹೊಸ ಕ್ರಮ ಕೈಗೊಳ್ಳುವುದರಿಂದ ಸೌರ್ವಜನಿಕರು ಹಾಗೂ ಮಹಿಳೆಯರು ಪೊಲೀಸರಿಗೆ ಬೇಗನೇ ದೂರು ನೀಡಲು ಉತ್ತೇಜಿಸುತ್ತದೆ ಎಂದು ಭಾವಿಸಿದ್ದೇವೆ ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಭೆಗೆ ಹೋಗುವೆ : ಬೊಮ್ಮಾಯಿ