Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಟೊಮೆಟೋಗೆ ಹೆಚ್ಚಿದೆ ಬೇಡಿಕೆ

webdunia
ಸೋಮವಾರ, 23 ಮೇ 2022 (20:05 IST)
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳಿಗೆ ಅಪಾರ ಪ್ರಮಾಣ ಹಾನಿ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಟೊಮೆಟೋ ಪೂರೈಕೆಯಲ್ಲಿ ಕುಸಿತವುಂಟಾಗಿ ಬೇಡಿಕೆ ಹೆಚ್ಚಾಗಿದೆ.
 
ಹೋಟೆಲ್‌ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್‌ ನಿಂದ ಟೊಮೆಟೋ ಆಮದು ಮಾಡಿಕೊಳ್ಳುವಂತಾಗಿದೆ.
 
ಪ್ರತಿ ದಿನ ಸುಮಾರು 5 ರಿಂದ 6 ಲಾರಿಗಳಿಂದ ಮಹಾರಾಷ್ಟ್ರದ ನಾಸಿಕ್‌ನಿಂದ ರಾಜಧಾನಿಗೆ ಟೊಮೆಟೋ ಪೂರೈಕೆ ಆಗುತ್ತಿದೆ. ಇದರಿಂದಾಗಿ ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗಿದೆ. ಟೊಮೆಟೋ ಪೂರೈಕೆಕುಸಿತ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ 14 ಕೆ.ಜಿ ಟೊಮೆಟೋ ಬಾಕ್ಸ್‌ 1,400 ರಿಂದ 1,600 ರೂ.ವರೆಗೂ ದರ ಆಗಿದೆ. ಅತ್ಯುತ್ತಮ ಗುಣಮಟ್ಟದ ಟೊಮೆಟೋ 1,800 ರಿಂದ 2 ಸಾವಿರ ವರೆಗೂ ಮಾರಾಟವಾಗುತ್ತಿದೆ ಎಂದು ಕಲಾಸಿ ಪಾಳ್ಯ ಮಾರುಕಟ್ಟೆ ಹೋಲ್‌ ಸೇಲ್‌ ವ್ಯಾಪಾರಿ ಶ್ರೀಕಾಂತ್‌ ಹೇಳುತ್ತಾರೆ.
 
ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಟೊಮೆಟೋ 100 ರಿಂದ 120 ರೂ.ವರೆಗೂ ಮಾರಾಟವಾಗುತ್ತಿದ್ದು 1 ಕೆ.ಜಿ.ಖರೀದಿಸುವವರು 250 ಗ್ರಾಂ ಖರೀದಿಸುತ್ತಿ ದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಎಲ್ಲ ತರಕಾರಿ ಉತ್ಪನ್ನಗಳು ಅಧಿಕವಾಗಿದೆ.
 
ಇನ್ನೂ ಒಂದು ತಿಂಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ತಿಳಿಸುತ್ತಾರೆ. ಈ ಮಧ್ಯೆ, ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಹೆಚ್ಚಳವಾಗಿರು ವುದು ತಳ್ಳುಬಂಡಿವ್ಯಾಪಾರಸ್ಥರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ,ಬೆಲೆ ಇಳಿ ಯುವ ವರೆಗೂ ಮಾರಾಟ ಮಾಡದೇ ಇರಲುಅವರು ನಿರ್ಧರಿಸಿದ್ದಾರೆ. ಅಕಾಲಿ ಮಳೆಯಿಂದಾಗಿ ಉತ್ತಮ ಗುಣಮಟ್ಟದ ಟೊಮೆಟೋ ಮಾರುಕಟ್ಟೆಗೆ ಬರುತ್ತಿಲ್ಲ. ತಳ್ಳುಬಂಡಿಯಲ್ಲಿ 100 ರಿಂದ 120 ರೂ. ದರದಲ್ಲಿ ಟೊಮೆಟೋ ಮಾರಾಟ ಕಷ್ಟವಾಗಲಿದೆ. ಈ ದೃಷ್ಟಿಯಿಂದಾಗಿ ಬೆಲೆ ಇಳಿಕೆ ಆಗುವವರೆಗೂ ಟೊಮೆಟೋ ಮಾರಾಟದಿಂದ ದೂರ ಉಳಿದಿದ್ದೇನೆ ಎನ್ನು ತ್ತಾರೆ ಎಂದು ತಳ್ಳು ಬಂಡಿ ವ್ಯಾಪಾರಿ ಪೀಣ್ಯದ ಜಗದೀಶ್‌.
 
ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರ, ಕೆ. ಆರ್‌.ಪುರಂ ಸೇರಿದಂತೆ ನಗರದ ಹಲವು ಮಾರುಕಟ್ಟೆ ಗಳಿಗೆ ಇದೀಗ ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಟೊಮೆಟೋ ಪೂರೈಕೆಆಗುತ್ತಿದೆ. ಮಂಡ್ಯ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 70 ರಿಂದ 80 ಟೆಂಪೊಮೂಲಕ ಟೊಮೆಟೋ ಪೂರೈಕೆ ಆಗುತ್ತಿದೆ. ಆದರೆ ಅದುಕೆಲವೇ ಕ್ಷಣಗಳಲ್ಲಿ ಮಾರಾಟವಾಗಿ ಹೋಗುತ್ತಿದೆ ಎಂದು ಹೋಲ್‌ ಸೇಲ್‌ ವ್ಯಾಪಾರಿಗಳು ಹೇಳುತ್ತಾರೆ.
 
ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನಪ್ರದೇಶಗಳಿಂದ ರಾಜಧಾನಿ ಮಾರುಕಟ್ಟೆಗೆ ಟೊಮೆಟೋಪೂರಕೆ ಆಗುತ್ತಿತ್ತು. ಆದರೆಅಕಾಲಿಕ ಮಳೆ ಹಿನ್ನೆಲೆಯಲ್ಲಿಅಪಾರ ಪ್ರಮಾಣದಲ್ಲಿ ಚಪ್ಪರದ ಬೆಳೆಗಳಿಗೆ ಅಪಾರ ಹಾನಿಉಂಟಾಗಿದ್ದರಿಂದ ಪೂರೈಕೆ ಮೇಲೂಪರಿಣಾಮ ಬೀರಿದೆ. ಆ ಹಿನ್ನೆಲೆಯಲ್ಲಿಮಹಾರಾಷ್ಟ್ರ ನಾಸಿಕ್‌ನಿಂದ ಟೊಮೆಟೋ ಪೂರೆಕೆ ಆಗುತ್ತಿದೆ. ಆದರೂ ಬೇಡಿಕೆ ಇದ್ದಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯ ಚಿಕಿತ್ಸೆಗೆ ಒಳಗಾಗಿ ಪ್ರಾಣ ಕಳೆದುಕೊಳ್ತಿರುವ ಮಹಿಳೆಯರು