Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಟೊಮೆಟೋ ಜ್ವರ : 80ಕ್ಕೂ ಹೆಚ್ಚು ಕೇಸ್ ಪತ್ತೆ!

ಮಕ್ಕಳಿಗೆ ಟೊಮೆಟೋ ಜ್ವರ : 80ಕ್ಕೂ ಹೆಚ್ಚು ಕೇಸ್ ಪತ್ತೆ!
ಕೊಚ್ಚಿ , ಗುರುವಾರ, 12 ಮೇ 2022 (12:07 IST)
ಕೊಚ್ಚಿ : ಈಗಲೂ ದೇಶದಲ್ಲಿ ಅತಿಹೆಚ್ಚು ಕೋವಿಡ್ ಸೋಂಕು ಮತ್ತು ಸಾವು ದಾಖಲಾಗುತ್ತಿರುವ ಕೇರಳದಲ್ಲಿ ಇದೀಗ ಟೊಮೆಟೊ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅದರಲ್ಲೂ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ 80 ಮಕ್ಕಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೈರಾಣು ಜ್ವರವಾದ ಇದು ಹೇಗೆ ಸೃಷ್ಟಿಯಾಗಿದೆ, ಕಾರಣ ಏನು? ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಇದು ಮಾರಣಾಂತಿಕವಲ್ಲ.

ಸೂಕ್ತ ಚಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡು ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೊಂದು ಅಪರೂಪದ ವೈರಲ್ ಜ್ವರವಾಗಿದ್ದು, ಮೈ ಮೇಲೆ ದದ್ದು (ರಾರಯಷಸ್), ಚರ್ಮದ ಉರಿ ಮತ್ತು ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದದ್ದುಗಳು ಕೆಂಪನೆಯ ಬಣ್ಣವಿದ್ದು, ಟೊಮೆಟೊಗೆ ಹೋಲುವ ಕಾರಣ, ಇದಕ್ಕೆ ಟೊಮೆಟೊ ಜ್ವರವೆಂದು ಹೆಸರು ಇದೆ.

ಜ್ವರ ಕಾಣಿಸಿಕೊಂಡವರಲ್ಲಿ ಟೊಮೆಟೊ ರೀತಿಯ ಗುಳ್ಳೆ, ಜ್ವರ, ಮೈಕೈ ನೋವು, ಸಂಧುಗಳಲ್ಲಿ ನೋವು, ಆಯಾಸ, ಬಳಲಿಕೆ ಕಾಣಿಸಿಕೊಳ್ಳುತ್ತದೆ. ಇದುವರೆಗೆ ಪತ್ತೆಯಾದ ಎಲ್ಲಾ 80 ಪ್ರಕರಣಗಳು ಕೇವಲ ಕೊಲ್ಲಂ ಜಿಲ್ಲೆಯೊಂದರಲ್ಲೇ ಕಾಣಿಸಿಕೊಂಡಿದೆ.

ಏನು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬಹುದು?

- ಮಕ್ಕಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು

- ಜ್ವರಪೀಡಿತ ಮಕ್ಕಳಿಗೆ ಸಾಧ್ಯವಾದಷ್ಟುಹೆಚ್ಚಿನ ಕಾಯಿಸಿ ಆರಿಸಿದ ನೀರು ಕುಡಿಸಬೇಕು

- ದದ್ದು ಅಥವಾ ಗುಳ್ಳೆಗಳನ್ನು ಕೆರೆಯುವುದಾಗಿ, ಒಡೆಯುವುದಾಗಲೀ ಮಾಡಬಾರದು

- ಜ್ವರ ಕಾಣಿಸಿಕೊಂಡವರು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು

- ಜ್ವರ ಬಂದವರಿಂದ ಅಂತರ ಕಾಯ್ದುಕೊಳ್ಳಬೇಕು, ಹೆಚ್ಚು ವಿಶ್ರಾಂತಿ ಪಡೆಯಬೇಕು

ಕೇರಳದಲ್ಲಿ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ 80 ಮಕ್ಕಳಿಗೆ ಹೊಸ ರೀತಿಯ ವೈರಾಣು ಜ್ವರ ಹರಡಿದೆ. ಅದಕ್ಕೆ ಟೊಮೆಟೋ ಫ್ಮ್ಲ ಎಂದು ಹೆಸರಿಡಲಾಗಿದೆ. ಈ ಸೋಂಕು ತಗಲಿದ ಮಕ್ಕಳ ಮೈಮೇಲೆ ಟೊಮೆಟೋವನ್ನು ಹೋಲುವ ಕೆಂಪು ಗಂಟುಗಳಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನ - ಬೆಳ್ಳಿ ಇಂದಿನ ಬೆಲೆ ಎಷ್ಟು?