Publish Date: Sat, 08 Apr 2023 (10:36 IST)
Updated Date: Sat, 08 Apr 2023 (10:15 IST)
ಬೆಳಗಾವಿ : ಕಳೆದ 40 ವರ್ಷಗಳಿಂದ ಡಿ.ಬಿ ಇನಾಮ್ದಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವವಾಗಿದೆ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಡಿ.ಬಿ ಇನಾಮ್ದಾರ್ ಕುಟುಂಬ ತೀರ್ಮಾನಿಸಿದೆ ಎಂದು ಡಿ.ಬಿ ಇನಾಮ್ದಾರ್ ಸೊಸೆ ಲಕ್ಷ್ಮೀ ಇನಾಮ್ದಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಕೆಟ್ ಕೈತಪ್ಪಿದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಲಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಡಿ.ಬಿ ಇನಾಮ್ದಾರ್ ಕುಟುಂಬ ತೀರ್ಮಾನ ಮಾಡಿದೆ. ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವವಾಗಿದೆ.
ಇನಾಮ್ದಾರ್ ಅವರು ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ, ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಈ ಅವರಿಗೆ ಆರೋಗ್ಯ ಸರಿಯಾಗಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಮ್ಮನ್ನ ಕೈ ಬಿಟ್ಟಿದೆ ಎಂದು ಲಕ್ಷ್ಮಿ ಇನಾಮ್ದಾರ್ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿಗೆ ಹೋಗಿ ನಮ್ಮನ್ನೂ ಟಿಕೆಟ್ಗೆ ಪರಿಗಣನೆ ಮಾಡಿ ಅಂತಾ ಮನವಿ ಮಾಡಿದ್ದೇವೆ. ಹೊಸ ಸರ್ವೇ ಮಾಡಿಸಿ ಅದರಲ್ಲಿ ನಮ್ಮ ಹೆಸರು ಬಂದ್ರೆ ಟಿಕೆಟ್ ಕೊಡಿ ಇಲ್ಲವಾದ್ರೆ ಬೇಡ ಅಂತಾ ಹೇಳಿದ್ದೇವೆ. ಅದಕ್ಕೆ ರಾಜ್ಯ ನಾಯಕರೂ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.