Select Your Language

Notifications

webdunia
webdunia
webdunia
webdunia

ಯಾರೂ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋಗಲ್ಲ

No one can leave BJP and go to Congress
ಹಾವೇರಿ , ಶುಕ್ರವಾರ, 7 ಏಪ್ರಿಲ್ 2023 (19:30 IST)
ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಕ್ಯಾಂಡಿಡೇಟ್​​​ಗಳು ಸಿಗ್ತಾ ಇಲ್ಲ. ಸರಿಯಾದ ಅಭ್ಯರ್ಥಿ ಸಿಗದೆ ಕನಸು ಕಾಣುತ್ತಿದ್ದಾರೆ ಅಂತಾ ಹಾವೇರಿಯ ಹಿರೇಕೆರೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಯಾರೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್​ನವರ ಹಗಲುಗನಸು ಕನಸಾಗೆ ಇರುತ್ತದೆ ಅಂತಾ ಕಾಂಗ್ರೆಸ್​​​​​ ವಿರುದ್ದ ಬಿ.ಸಿ.ಪಾಟೀಲ್ ವ್ಯಂಗವಾಡಿದ್ರು. ಇದೇ ಸಂದರ್ಭದಲ್ಲಿ ಸುದೀಪ್ ಕುರಿತು ಮಾತನಾಡಿದ ಅವರು, ಸುದೀಪ್ ಬೆಂಬಲ ಸಿಕ್ಕಿರೋದು ಬಿಜೆಪಿಗೆ ದೊಡ್ಡ ಶಕ್ತಿ. ದೊಡ್ಡ ಮತಗಳಾಗಿ ಪರಿವರ್ತನೆ ಆಗುತ್ತದೆ. ಸುದೀಪ್ ದೊಡ್ಡ ನಟರು, ಜನಾನುರಾಗಿಯಾಗಿದ್ದಾರೆ, ಬಹಳ ಬುದ್ದಿವಂತರಿದ್ದಾರೆ. ಅವರ ಜನಪ್ರಿಯತೆ ನಮ್ಮ ಪಕ್ಷಕ್ಕೆ ಲಾಭವಾಗುತ್ತದೆ. ಹಿರೇಕೆರೂರಿನಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಅಭಿವೃದ್ಧಿ ಮಾಡಿದ್ದೇವೆ, ಅಭಿವೃದ್ಧಿ ನಮ್ಮ ಟ್ರಂಪ್ ಕಾಡ್೯. ಅಭಿವೃದ್ಧಿ ನೋಡಿ ಜನ ನಮಗೆ ಮತ ಹಾಕುತ್ತಾರೆ ಅಂತಾ ಬಿ.ಸಿ.ಪಾಟೀಲ್ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗದಲ್ಲಿ ನಿಲ್ಲದ ಪೋಸ್ಟರ್ ವಾರ್