Select Your Language

Notifications

webdunia
webdunia
webdunia
webdunia

ನಮ್ಮ ಅವಧಿಯಲ್ಲಿ ಯಾವುದೇ ಹಗರಣ ಇರಲಿಲ್ಲ: ಸಿದ್ದರಾಮಯ್ಯ

ನಮ್ಮ ಅವಧಿಯಲ್ಲಿ ಯಾವುದೇ ಹಗರಣ ಇರಲಿಲ್ಲ: ಸಿದ್ದರಾಮಯ್ಯ
bengaluru , ಸೋಮವಾರ, 23 ಮೇ 2022 (17:14 IST)
ನಮ್ಮ ಅವಧಿಯಲ್ಲಿ ಯಾವುದೇ ಹಗರಣಗಳು ಇರಲಿಲ್ಲ. ಈಗ ರಾಜ್ಯದಲ್ಲಿ ಇರುವುದು ಲೂಟಿಕೋರರ ಸರಕಾರವಾಗಿದೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೂಟಿಕೋರ ಬಿಜೆಪಿ ಸರಕಾರ ಕಿತ್ತೊಗೆದು ಕಾಂಗ್ರೆಸ್‌ ಸರಕಾರ ಮತ್ತೆ ಅಧಿಕಾರ ಬರಬೇಕಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜಕಾಲುವೆ ಸಮಸ್ಯೆ ಸರಿಪಡಿಸಲು ೧೨೦೦ ಕೋಟಿ ರೂ. ನೀಡಿದ್ದೆ. ನನ್ನ ಅವಧಿಯಲ್ಲಿ ಶೇ.೨೫ರಷ್ಟು ರಾಜಕಾಲುವೆ ತೆರವುಗೊಳಿಸಲಾಗಿತ್ತು ಎಂದು ಅವರು ವಿವರಿಸಿದರು.
ಬೊಮ್ಮಾಯಿ ಅವರು ರಾಜಕಾಲುವೆ ಸಮಸ್ಯೆ ಬಗೆಹರಿಸಲು ೧೫೦೦ ಕೋಟಿ ರೂ. ಕೊಡುತ್ತೇನೆ ಎಂದಿದ್ದಾರೆ. ಇದುವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈನ ರೇವ್‌ ಪಾರ್ಟಿಯಲ್ಲಿ ಟೆಕ್ಕಿ ಬಲಿ: ಡ್ರಗ್ಸ್‌ ಓವರ್‌ ಡೋಸ್?