Publish Date: Wed, 01 Mar 2023 (18:45 IST)
Updated Date: Wed, 01 Mar 2023 (19:03 IST)
ಸಿಲಿಕಾನ್ ಸಿಟಿಯಲ್ಲಿ ಬರುಬರುತ್ತಾ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬತೆ ಇವತ್ತು ಬೇಕರಿ ಮಾಲೀಕನ ಮೇಲೆ ಪುಡಿ ರೌಡಿಯೊಬ್ಬ ಹಲ್ಲೆ ನಡೆಸಿ ಕೊಲೆ ಜೀವ ಬೆದರಿಕೆ ಹಾಕಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಾಗಾಳದಲ್ಲಿ ಘಟನೆ ನಡೆದಿದ್ದು, ಬೇಕರಿ ಮಾಲೀಕ ರಘುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕಾಶ್ ಎಂಬ ಪುಡಿರೌಡಿ ಆಗಾಗ ಬೇಕರಿ ಬಳಿ ಬಂದು ಟೀ,ಕಾಫಿ ಕುಡಿದು ಹೋಗುತ್ತಿದ್ದ. ಇವತ್ತು ಪ್ರಕಾಶನಿಗೆ ಏನ್ ಆಯ್ತೋ ಗೊತ್ತಿಲ್ಲ.. ಕ್ಷುಲ್ಲಕ ಕಾರಣಕ್ಕೆ ಬೇಕರಿ ಬಳಿ ಬಂದು ರಘುನಾಥ್ ಬಳಿ ಕಿರಿಕ್ ಶುರುಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಬೇಕರಿಗೆ ನುಗ್ಗಿರುವ ಪ್ರಕಾಶ್, ಶೋಕೇಸ್ ಗ್ಲಾಸ್ ಒಡೆದು ಹಾಕಿ ಅವಾಚ್ಯ ಶಬ್ದಗಳಿಂದ ರಘುನಾಥ್ಗೆ ನಿಂದಿಸಿದ್ದಾನೆ. ಪ್ರಶ್ನಿಸಿದ್ದಕ್ಕೆ ರಘುನಾಥ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇನ್ನೂ ಪ್ರಕಾಶ್ ನಡೆಸಿರುವ ದಾಂಧಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೊಂದ ಬೇಕರಿ ಮಾಲೀಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಬೇಕರಿಗೆ ನುಗ್ಗಿ ದಾಂಧಲೆ ನಡೆಸಿರುವ ಪ್ರಕಾಶ್ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.