Publish Date: Wed, 01 Mar 2023 (18:34 IST)
Updated Date: Wed, 01 Mar 2023 (18:43 IST)
ಮದುವೆಯಾಗಲೇಬೇಕು ಎಂದು ಹಠಕ್ಕೆ ಬಿದ್ದು ನಡೆಸಿದ ಕೃತ್ಯ ಇದು. ತನ್ನ ಪ್ರಿಯತಮೆಯನ್ನ ಬಯಸಿದ್ದಕ್ಕಿಂತ ಹೆಚ್ಚಾಗಿ ಪೊಸೇಸೀವ್ ನೆಸ್ ಬೆಳೆಸಿಕೊಂಡಿದ್ದ ಆತ. ಆ ಪೊಸೇಸೀವ್ ನೆಸ್ ಕೊನೆಗೆ ಆತನನ್ನ ಹಂತಕನನ್ನಾಗಿ ಮಾಡಿ ಬಿಟ್ಟಿದೆ ..ಹಾಗೆ ಅವರಿಬ್ರ ಪ್ರೀತಿಗೆ ಅಡ್ಡ ಬಂದಿದ್ದು ಜಾತಿ...ಯಸ್ ನಗರದಲ್ಲಿ ಪ್ರೀತಿಗಾಗಿ ಹತ್ಯೆ ನಡೆದುಹೋಗಿದೆ .ಹತ್ಯೆಯಾದವಳ ಹೆಸರು ಲೀಲಾ ಪವಿತ್ರ ನಲಮಟ್ಟಿ ಎಂದು .. ಹಂತಕನ ಹೆಸರು ದಿವಾಕರ್ ಬನಾಲ .. ನೆನ್ನೆ ಸರಿ ಸುಮಾರು 7-30 ರ ಸಂಧರ್ಭದಲ್ಲಿ ದಿವಾಕರ್ , ಲೀಲಾಳನ್ನ ಕೊಲ್ಲಲೆಂದು ಬಂದು ಒಟ್ಟು 16 ಬಾರಿ ಚಾಕುವಿನಿಂದ ಇರಿದಿದ್ದಾನೆ... ಈ ಘಟನೆ ನಡೆದಿದ್ದು ಯುವತಿ ಕೆಲಸ ಮಾಡುತ್ತಿರುವ ಮುರುಗೇಶ್ ಪಾಳ್ಯದ ಒಮೇಗಾ ಹೆಲ್ತ್ ಕೇರ್ ಬಳಿ ..
ಮೃತ ಲೀಲಾ ಆಂದ್ರದ ಕಾಕಿನಾಡ್ ಜಿಲ್ಲೆಯವಳು ಹಂತಕ ಕೂಡ ಆಂದ್ರಪ್ರದೇಶದ ಶ್ರೀಕಾಕುಳಂ ನಿವಾಸಿ. ಲೀಲಾ ಒಮೇಗಾ ಹೆಲ್ತ್ ಕೇರ್ ನಲ್ಲಿ ಕೆಲಸ ಮಾಡ್ತಿದ್ರೆ ಹಂತಕ ದಿವಾಕರ್ ದೊಮ್ಮಲೂರು ಬಳಿ ಇರುವ ಲಾಜೀಸ್ ಹೆಲ್ತ್ ಕೇರ್ ನಲ್ಲಿ ಕೆಲಸ ಮಾಡಿಕೊಂಡಿದ್ದ . ಇಬ್ಬರು ತೆಲುಗು ಮೂಲದವರಾದ್ದರಿಂದ ಸಹಜವಾಗಿಯೇ ಪ್ರೀತಿ ಮೂಡಿತ್ತು. ಸುಮಾರು ಐದು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ದರು. ಆದರೆ ಕೊನೆಗೆ ಇಬರಿಬ್ಬರ ನಡುವೆ ಅಡ್ಡ ಬಂದಿದ್ದು ಜಾತಿ .. .ಕಳೆದ ಮೂರ್ನಾಲ್ಕು ತಿಂಗಳಿನಿಂದ ಲೀಲಾ , ದಿವಾಕರ್ ನನ್ನ ಅವಾಯ್ಡ್ ಮಾಡಲು ಶುರು ಮಾಡಿದ್ದಳು. ಇದರಿಂದ ಸಹಜವಾಗಿಯೇ ದಿವಾಕರ್ ನೊಂದಿದ್ದ. ಇದನ್ನ ಪ್ರಶ್ನಿಸಲು ಹೋದಾಗ ಆಕೆ ನಿಜ ಸಂಗತಿ ತಿಳಿಸಿದ್ದಳು. ತನ್ನ ಮನೆಯಲ್ಲಿ ನಮ್ಮಿಬ್ಬರ ಜಾತಿ ಬೇರೆ ಬೇರೆ ಹೀಗಾಗಿ ಸರಿ ಹೋಗೋದಿಲ್ಲ ಮದ್ವೆ ಬೇಡ ಎಂದಿರುವ ವಿಚಾರ ಬಾಯ್ಬಿಟ್ಟಿದ್ದಳು. ಆದ್ರೆ ಇದನ್ನ ಒಪ್ಪದ ದಿವಾಕರ್ ತಾವಿಬ್ಬರು ಮದ್ವೆಯಾಗಲೇಬೇಕೆಂದು ಪಟ್ಟು ಹಿಡಿದಿದ್ದ. ಇನ್ನು ಇದೇ ವಿಚಾರವಾಗಿ ನೆನ್ನೆ ತನಗೆ ಸಿಗದ ಪ್ರೀತಿ ಯಾರಿಗೂ ಸಿಗಬಾರದೆಂಬ ಉದ್ದೇಶದಿಂದ ಎರಡು ಚಾಕುವನ್ನ ಖರೀದಿ ಮಾಡಿದ್ದ . ಮೊದಲು ಮನವೊಲಿಕೆ ಒಪ್ಪದಿದ್ದಲ್ಲಿ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆಂದು ನಿರ್ಧರಿಸಿದ್ದ. ಹೀಗಾಗಿ ಮಧ್ಯಾಹ್ನ ಮೂರುವರೆ ಸಮಯದಲ್ಲಿ ಲೀಲಾ ಕೆಲಸ ಮಾಡುವ ಸ್ಥಳಕ್ಕೆ ಬಂದು ಆಕೆಯನ್ನ ಹೊರ ಕರೆಸಿಕೊಂಡಿದ್ದ. ಹೆಚ್ಚು ಕಮ್ಮಿ ಮೂರು ಗಂಟೆಗಳವರೆಗೂ ಆಕೆಯನ್ನ ಮನವೊಲಿಸೋ ಪ್ರಯತ್ನ ಮಾಡಿದ್ದ. ಆದ್ರೆ ಯಾವಾಗ ಲೀಲಾ ತನ್ನ ಪೋಷಕರ ಮಾತನ್ನ ಪಟ್ಟಾಗಿ ಹಿಡಿದ್ಲೋ ರೋಸಿ ಹೋದ ದಿವಾಕರ್ ಆಕೆಯನ್ನ ಮನಸೋ ಇಚ್ಚೆ ಚಾಕುವಿನಿಂದ ಇರಿದಿದ್ದ. ಹೀಗೆ ಹದಿನಾರು ಬಾರಿ ಚುಚ್ಚಿ ಕೊಂದು ಎಲ್ಲಿಯೂ ಓಡಿಹೋಗದೆ ಸ್ಥಳದಲ್ಲೆ ಕೂತಿದ್ದ. ಇನ್ನು ಆಕೆಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದೇ ಆದ್ರೆ ಧೈರ್ಯ ಸಾಲಲಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ . ಸದ್ಯ ಆರೋಪಿ ದಿವಾಕರ್ ನನ್ನ ಬಂಧಿಸಿರುವ ಜೀವನ್ ಭೀಮಾನಗರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ