Publish Date: Wed, 01 Mar 2023 (17:22 IST)
Updated Date: Wed, 01 Mar 2023 (17:24 IST)
ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ಪ್ರತಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ. 14.2 ಕೆಜಿ LPG ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು, ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 1103 ರೂಪಾಯಿ ಆಗಿದ್ದು, ಎಂಟು ತಿಂಗಳ ಬಳಿಕ ಗೃಹ ಬಳಕೆಯ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಜುಲೈ 6 2022ರಿಂದ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ. ವಾಣಿಜ್ಯ ಸಿಲಿಂಡರ್ ಬೆಲೆ 350 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ 28ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದೆಹಲಿಯಲ್ಲಿ 1769 ರೂಪಾಯಿ ಬದಲು 2119.5 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ 1870 ರೂ. ಇದ್ದು, ಇದೀಗ 2221.5 ರೂ,ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1917ರೂ,ಗೆ ಲಭ್ಯವಿದ್ದ ಸಿಲಿಂಡರ್ ಇದೀಗ 2268 ರೂ,ಗೆ ಲಭ್ಯವಾಗಲಿದೆ.