Select Your Language

Notifications

webdunia
webdunia
webdunia
webdunia

ಮೋದಿ ಬದುಕಿರಲಿ, ಆರೋಗ್ಯವಾಗಿರಲಿ-ಸಿದ್ದರಾಮಯ್ಯ

May Modi live and be healthy
bangalore , ಬುಧವಾರ, 1 ಮಾರ್ಚ್ 2023 (17:20 IST)
‘ಮರ್‌ ಜಾ ಮೋದಿ ಎಂದು ಕಾಂಗ್ರೆಸ್​​​​ನವರು ಘೋಷಣೆ ಕೂಗುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆಯನ್ನು ಅವರೇ ಸೃಷ್ಟಿ ಮಾಡಿಕೊಂಡಿದ್ದಾರೆ, ಯಾರೂ ಹೇಳಿಲ್ಲ. ಮೋದಿ ಅವರು ಬದುಕಿರಲಿ, ಆರೋಗ್ಯವಾಗಿ ಇರಲಿ. ಜನರ ಕೆಲಸ ಮಾಡಿಲ್ಲ ಅಂತ ಅಷ್ಟೇ ನಾವು ಹೇಳೋದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಾಪ ಯಡಿಯೂರಪ್ಪಗೆ ಒಳಗೆ ಕುದಿಯುತ್ತಿದೆ. ಬಿಜೆಪಿ ಸೋತ್ರೆ ಸಾಕು ಎನ್ನುವಂತೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಅಲ್ಲ, ಬಿರುಗಾಳಿ ಬೀಸಲು ಶುರುವಾಗಿದೆ. ಬಿರುಗಾಳಿ ಎದುರು ಹಾರಿ ಹೋಗಲಿದ್ದಾರೆ. ಅಭಿವೃದ್ಧಿ ಮೇಲೆ ಚರ್ಚೆಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದೇನೆ. ರಮೇಶ ಜಾರಕಿಹೊಳಿ ಒಬ್ಬ ಹುಂಬ, ಅವನ ಮಾತಿಗೆ ಅಷ್ಟು ಕಿಮ್ಮತ್ತು ಕೊಡೋದು ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ