ಬೆಂಗಳೂರು : ಯುಕೆ ದೇಶದಲ್ಲಿ ಕೆಲಸ ಕೊಡಿಸೋದಾಗಿ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ನೈಜೀರಿಯಾ ಪ್ರಜೆ ನೋಕೋಚಾ ಕಾಸ್ಮೀರ್ನ ಬಂಧನವಾಗಿದೆ.
 
ಕಾಸ್ಮೀರ್ ಶೆಲ್ ಆಯಿಲ್ ಕಂಪನಿಗಳಲ್ಲಿ ಮ್ಯಾನೆಜ್ಮೆಂಟ್ ಹುದ್ದೆ, ಸ್ಟಾಫ್ ನರ್ಸ್, ಮುಂತಾದ ಹುದ್ದೆ ಕೊಡಿಸುವುದಾಗಿ ಮೋಸ ಮಾಡಿರುವುದು ಕಂಡುಬಂದಿದೆ. 
 
 			
 
 			
			                     
							
							
			        							
								
																	ಆರೋಪಿ ದೊಡ್ಡಗುಬ್ಬಿ ಮೂಲದ ಮಹಿಳೆಗೆ ಯುಕೆ ನಲ್ಲಿ ಸ್ಟಾಫ್ ನರ್ಸ್ ಕೆಲಸ ಕೊಡಿಸುವುದಾಗಿ ಇ-ಮೇಲ್ ಕಳಿಸಿದ್ದಾನೆ. ನಂತರ ಆ ಮಹಿಳೆಯಿಂದ ವಿವಿಧ ಶುಲ್ಕ ಹಾಗೂ ಕ್ಲಿಯರೆನ್ಸ್ ಶುಲ್ಕ ಅಂತಾ 35 ಲಕ್ಷ ಹಣವನ್ನ ಪೀಕಿದ್ದಾನೆ. ಹಣ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.
									
										
								
																	ಈ ಬಗ್ಗೆ ಈಶ್ಯಾನ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ.