Select Your Language

Notifications

webdunia
webdunia
webdunia
webdunia

ಸಿಬಿಐನಿಂದ ಡಿಸಿಎಂ ಮನೀಶ್ ಸಿಸೋಡಿಯಾ ಅರೆಸ್ಟ್

ಅಬಕಾರಿ ನೀತಿ ಪ್ರಕರಣ
ನವದೆಹಲಿ , ಸೋಮವಾರ, 27 ಫೆಬ್ರವರಿ 2023 (10:22 IST)
ನವದೆಹಲಿ : ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
 
ಸೋಮವಾರ ಬೆಳಗ್ಗೆ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ದೆಹಲಿಯ ಹಣಕಾಸು, ಅಬಕಾರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ವಿಚಾರಣೆ ನಡೆಸಿದ್ದರು.

ಒಂಭತ್ತು ಗಂಟೆಗಳ ನಂತರ ಬಂಧನವಾಗಿದೆ. ಸತ್ಯೇಂದ್ರ ಜೈನ್ ನಂತರ ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವ ಸಿಸೋಡಿಯಾ ಆಗಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಸಿಸೋಡಿಯಾ ಅವರ ಮನೆ ಮತ್ತು ಸಿಬಿಐ ಕಚೇರಿಯ ಹೊರಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವರದಕ್ಷಿಣೆಯಾಗಿ ಹಳೆಯ ಬೆಡ್ ನೀಡಿದ್ದಕ್ಕೆ ಮದುವೆ ಕ್ಯಾನ್ಸಲ್ ಮಾಡಿದ ವರ!