Publish Date: Fri, 10 Apr 2020 (09:49 IST)
Updated Date: Fri, 10 Apr 2020 (09:51 IST)
ಚಿತ್ರದುರ್ಗ : ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ನಡೆಸುತ್ತಿದ್ದ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ 3 ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ.
ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಮಾಡಿದ ಹಿನ್ನಲೆ ಜನರಿಗೆ ಹೆಚ್ಚುವರಿ ಪಂಡಿತರ ವಿತರಣೆ ಮಾಡಲು ಸರ್ಕಾರ ಆದೇಶಿಸಿದೆ. ಆದರೆ ಚಿತ್ರದುರ್ಗ ಜಿಲ್ಲೆಯ 3 ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ಎಸಗಿದ ಹಿನ್ನಲೆಯಲ್ಲಿ 3 ಅಂಗಡಿಗಳ ಲೈಸೆನ್ಸ್ ರದ್ದು ಮಾಡುವಂತೆ ಆಹಾರ, ನಾಗರಿಕ ಸರಬರಾಜು ಇಲಾಖೆಯಿಂದ ಆದೇಶಿಸಿದೆ.
ಚಿತ್ರದುರ್ಗದ ಗಾಂಧಿನಗರ ಬಡಾವಣೆಯಲ್ಲಿರುವ ಅಂಗಡಿ, ಹಿರಿಯೂರು ತಾಲೂಕಿನ ಬಬ್ಬೂರು ನ್ಯಾಯಬೆಲೆ ಅಂಗಡಿ , ಚಳ್ಳಕೆರೆ ತಾಲೂಕಿನ ಕರಿಕೆರೆ ಅಂಗಡಿಯಲ್ಲಿ ಲೈಸೆನ್ಸ್ ರದ್ದು ಮಾಡಲಾಗಿದೆ.