ಬೆಂಗಳೂರು: ಬಿಪಿಎಲ್ ಕಾರ್ಡ್ ಅಕ್ರಮವಾಗಿ ಪಡೆದುಕೊಂಡಿದ್ದರೆ ರಾಜ್ಯ ಸರ್ಕಾರ ಶಾಕ್ ಕೊಡಲು ಮುಂದಾಗಿದೆ. ಈ ಮಾಸಾಂತ್ಯದೊಳಗೆ ಅನರ್ಹ ಬಿಪಿಎಲ್ ಕಾರ್ಡ್ ಗಳಿಗೆ ಕೊಕ್ ನೀಡಲು ಮುಂದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಲು ಕೇಂದ್ರ ಸರ್ಕಾರ ಕೆಲವು ಮಾನದಂಡ ನೀಡಿದೆ. ಅದರ ಅನ್ವಯ ಇಲ್ಲದ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯದ ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ ನಿರ್ಧರಿಸಿದೆ.
ಮಾನದಂಡಗಳ ಪ್ರಕಾರ 17. ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಗಳಿವೆ. ಕೆಲವು ಕಡೆ ಒಂದೇ ಕುಟುಂಬದಲ್ಲಿ ಎರಡು ಕಾರ್ಡ್ ಗಳಿರುವ ಉದಾಹರಣೆಗಳಿವೆ. ಈಗ ಅಂತಹ ಕಾರ್ಡ್ ಗಳನ್ನೆಲ್ಲಾ ಪತ್ತೆ ಹಚ್ಚಿ ಡಿಲೀಟ್ ಮಾಡಲು ಸರ್ಕಾರ ಮುಂದಾಗಿದೆ.
ಈ ರೀತಿ ಅನರ್ಹ ಕಾರ್ಡ್ ಗಳನ್ನು ರದ್ದು ಮಾಡುವುದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 1500 ಕೋಟಿ ರೂ. ಉಳಿತಾಯವಾಗಲಿದೆ. ಇದರಿಂದ ಈಗಾಗಲೇ ಆರ್ಥಿಕ ಹೊರೆಯಿಂದ ತತ್ತರಿಸಿರುವ ಸರ್ಕಾರಕ್ಕೆ ಕೊಂಚ ಮಟ್ಟಿಗೆ ಹೊರೆ ಕಡಿಮೆಯಾದಂತಾಗುತ್ತದೆ ಎನ್ನುವುದು ಇದರ ಹಿಂದಿನ ಲೆಕ್ಕಾಚಾರವಾಗಿದೆ.