Select Your Language

Notifications

webdunia
webdunia
webdunia
webdunia

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ: ಹಗ್ಗ ತುಂಡಾಗಿ ಬದುಕುಳಿದ ಮಹಿಳೆ

Due to family debt, four commit suicide, Karnataka Police

Sampriya

ಆನೇಕಲ್‌ , ಭಾನುವಾರ, 14 ಸೆಪ್ಟಂಬರ್ 2025 (10:51 IST)
ಆನೇಕಲ್‌: ಹೊಸಕೋಟೆ  ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರು ಮಾತ್ರ ಬದುಕುಳಿದಿದ್ದಾರೆ.

ಆತ್ಮಹತ್ಯೆಗೆ ಸಾಲಬಾಧೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ಗಂಡ, ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.‌ ಅದೃಷ್ಟವಶಾತ್‌ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆಯಲ್ಲಿ ಗಂಡ ಶಿವು (32 ವರ್ಷ), ಪುತ್ರಿ ಚಂದ್ರಕಲಾ (11 ವರ್ಷ), ಉದಯ್ ಸೂರ್ಯ (7 ವರ್ಷ) ಮೃತಪಟ್ಟಿದ್ದಾರೆ. ಈ ಹಿಂದೆ  ಶಿವು ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿಕೊಂಡಿತ್ತು. 

ಸಾಲ ಹೆಚ್ಚಾಗಿದ್ದರಿಂದ ದಂಪತಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ. ನಾವು ಸತ್ತರೆ ಮಕ್ಕಳು ತಬ್ಬಲಿಗಳಾಗುತ್ತಾರೆ ಅಂತ ಮಕ್ಕಳನ್ನೂ ಸಾಯಿಸುವ ನಿರ್ಧಾರ ಮಾಡಿದ್ದಾರೆ.  

ಮೊದಲಿಗೆ ಗಂಡ ಮತ್ತು ಮಕ್ಕಳ ಕುತ್ತಿಗೆಯನ್ನ ವೇಲ್‌ನಿಂದ ಹೆಂಡತಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಹಗ್ಗ ತುಂಡಾದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆ.16ರಂದು ಮಂಗಳೂರು ನಗರದಲ್ಲಿ ಪೂರೈಕೆಯಾಗಲ್ಲ ನೀರು