ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದರು.
ವಿಜಯಪುರದಲ್ಲಿ ತಮ್ಮ ವಿರುದ್ಧ ನಡೆದ ಸಂಚಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತಾಗುತ್ತದೆ. ವಿಜಯಪುರದಲ್ಲಿ ಕಾಂಗ್ರೆಸ್ ಬಿಟ್ಟರೇ ಬೇರೆಯವರು ಮಾತನಾಡಿಲ್ಲ. ಹತಾಶೆಯಾಗಿರುವ ಕಾಂಗ್ರೆಸ್‌ನವರು ಒಂದು ವಿಷಯಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿತ್ತು. ಅದೆಲ್ಲ ಈಗ ಬಂದ್ ಆಗಿದೆ. ದೇವರಿಗೆ ಬೈದಿದ್ದಾರೆ ಎಂದು ನೆಪ ಹೇಳುತ್ತಿದ್ದು, ಕಾಂಗ್ರೆಸ್‌ನವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡುವ ಬಗ್ಗೆ ಕಲಿಸಿಲ್ಲ ಎಂದರು.
ನನ್ನನ್ನು ಮುಗಿಸಲು ನಡೆದ ಸಂಚು ಇದಾಗಿದೆ. ಆ ರೀತಿ ಆದರೆ ರಾಜ್ಯದಲ್ಲಿ ಬೆಂಕಿ ಬೀಳುತ್ತದೆ ಎಂದರು. ಸದ್ಯ ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಹೊರಬರುತ್ತದೆ. ಈ ಬಗ್ಗೆ ಎನ್‌ಐಎ ತನಿಖೆಯಾಗಲಿ. ನನ್ನನ್ನು ಮುಗಿಸೋಕೆ ಆಗಲ್ಲ. ನಮ್ಮಲ್ಲಿ ರಾಣಿಚೆನ್ನಮ್ಮ, ರಾಯಣ್ಣ, ಅಂಬೇಡ್ಕರ್ ರಕ್ತ ಇದೆ. ಹೀಗೆ ಮುಂದುವರೆದರೆ ನಮ್ಮವರು ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಸಿದರು.