Select Your Language

Notifications

webdunia
webdunia
webdunia
Wednesday, 23 April 2025
webdunia

ಪತ್ನಿ ಪ್ರಿಯಾಂಕಾ ಗಾಂಧಿ ಸಂಸದೆಯಾದ ಬೆನ್ನಲ್ಲೇ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ಕೊಟ್ಟ ರಾಬರ್ಟ್ ವಾದ್ರಾ

ಪ್ರಿಯಾಂಕಾ ಗಾಂಧಿ ವಾದ್ರಾ

Sampriya

ನವದೆಹಲಿ , ಸೋಮವಾರ, 14 ಏಪ್ರಿಲ್ 2025 (15:45 IST)
Photo Credit X
ನವದೆಹಲಿ: ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸುಳಿವು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ನನ್ನ ರಾಜಕೀಯ ಪ್ರವೇಶ ಬಗ್ಗೆ ಆಸಕ್ತಿ ತೋರಿಸಿದರೆ, ಕುಟುಂಬದವರ ಆಶೀರ್ವಾದವಿದ್ದರೆ ನಾನು ಮುಂದಿನ ಹೆಜ್ಜೆಯನ್ನು ಇಡುತ್ತೇನೆ ಎಂದು ಹೇಳಿದ್ದಾರೆ.

ಸೋಮವಾರ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾಬರ್ಟ್ ವಾದ್ರಾ ಅವರು, ಇನ್ನೂ ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡಲು ಗಾಂಧಿ ಕುಟುಂಬದೊಂದಿಗಿನ ನಂಟು  ಎಂದರು. ಅನೇಕ ರಾಜಕೀಯ ಪಕ್ಷಗಳು ಅವರನ್ನು ರಾಜಕೀಯ ಚರ್ಚೆಗಳಿಗೆ ಎಳೆಯಲು ಪ್ರಯತ್ನಿಸಿದವು, ಆಗಾಗ್ಗೆ ಅವರ ಹೆಸರನ್ನು ಚುನಾವಣೆಗಳು ಅಥವಾ ಇತರ ವಿಷಯಗಳ ಸಮಯದಲ್ಲಿ ವ್ಯಾಕುಲತೆಯಾಗಿ ಬಳಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದನ್ನು ನೋಡಿದ್ದೇನೆ. ಇವರ ಮೂಲಕ ಅನೇಕ ವಿಚಾರಗಳನ್ನು ಕಲಿತುಕೊಂಡಿದ್ದೇನೆ ಎಂದರು.

ನಾನು ಈ ಹಿಂದಿನಿಂದಲೂ ಪ್ರಿಯಾಂಕಾಳನ್ನು ಸಂಸತ್ತಿನಲ್ಲಿ ನೋಡಬೇಕೆಂದು ಬಯಸಿದ್ದೆ. ಇದೀಗ ಆಕೆ ತುಂಬಾನೇ ಕಷ್ಟ ಪಡುತ್ತಿದ್ದಾಳೆ.

ಕಾಂಗ್ರೆಸ್ ಪಕ್ಷವು ತಾನು ರಾಜಕೀಯಕ್ಕೆ ಸೇರಬೇಕೆಂದು ನಿರ್ಧರಿಸಿದರೆ, ವಿಭಜಕ ಶಕ್ತಿಗಳ ವಿರುದ್ಧ ಹೋರಾಡಲು ಮತ್ತು ದೇಶವನ್ನು ಜಾತ್ಯತೀತವಾಗಿಡಲು ಸಂಸತ್ತಿನಲ್ಲಿ ಹೆಚ್ಚಿನ ಧ್ವನಿಯ ಅಗತ್ಯವನ್ನು ಅರ್ಥಮಾಡಿಕೊಂಡು ನಾನು ಮುಂದಿನ ಹೆಜ್ಜೆಯಿಡುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather, ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ: ಬಿಸಿಲ ಬೇಗೆಗೆ ಸುಸ್ತಾಗಿದ್ದ ಜನತೆಗೆ ತಂಪೆರೆದ ವರುಣ