ಬೆಂಗಳೂರು: ಇಂದು ಚಂದ್ರ ಗ್ರಹಣ 12.20 ರಿಂದ ಮಧ್ಯರಾತ್ರಿ ಮಧ್ಯಾಹ್ನ 1.26ರ ವರೆಗೆ ಇರಲಿದೆ. ಗ್ರಹಣದ ಸಂದರ್ಭದಲ್ಲಿ ಎಚ್ಚರದಿಂದ ಇರಬೇಕು.
ಗ್ರಹಣದ ಸಮಯದಲ್ಲಿ ಆಹಾರ ತಯಾರಿಸುವುದರಿಂದ ಮತ್ತು ಸೇವಿಸುವುದರಿಂದ ದೂರವಿರುವುದು ಒಳಿತು.
ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದರಿಂದ ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.
ಒಂದು ವೇಳೆ ಗ್ರಹಣದ ಸಮಯದಲ್ಲಿ ಊಟ ಮಾಡಲೇ ಬೇಕಿದ್ದರೆ ನಾವು ತಿನ್ನುವ ಆಹಾರಕ್ಕೆ ತುಳಸಿ ಎಲೆಯನ್ನು ಹಾಕಿ. ಈ ರೀತಿ ಮಾಡಿದ್ದಲ್ಲಿ ಅಶುದ್ಧವಾಗುವುದನ್ನು ತಪ್ಪಿಸಬಹುದು.
ಚಂದ್ರ ಗ್ರಹಣವನ್ನು ನೇರವಾಗಿ ಕಣ್ಣಿನಿಂದ ನೋಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಏಕೆಂದರೆ ಇದು ಕಣ್ಣುಗಳಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಚಂದ್ರ ಗ್ರಹಣವನ್ನು ಖಗೋಳ ಆಸಕ್ತಿಯಿಂದ ಗಮನಿಸಬಹುದು. ಟೆಲಿಸ್ಕೋಪ್‌ಗಳು, ದೂರದರ್ಶಕಗಳು ಅಥವಾ ಕ್ಯಾಮೆರಾಗಳನ್ನು ಬಳಸಿ ಚಂದ್ರ ಗ್ರಹಣವನ್ನು ದಾಖಲಿಸಬಹುದು.