ಬೆಂಗಳೂರು: ಕಾನೂನಿನ ಅವಧಿ ಮೀರಿ ಹೊಟೇಲ್ ನಲ್ಲಿ ಪಾರ್ಟಿ ಆರೋಪದ ಮೇರೆಗೆ ಜೆಡ್ಬ್ಯೂ ಹೊಟೇಲ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಹಿನ್ನಲೆ ನಿನ್ನೆ ತಡರಾತ್ರಿ ಸಿಸಿಬಿ ಈ ರೈಡ್ ಮಾಡಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅವಧಿ ಮೀರಿ ಪಾರ್ಟಿ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಿಕ್ಕ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಕೂಡಲೇ ದಾಳಿ ನಡೆಸಿದ್ದಾರೆ.
ಈ ಹೊಟೇಲ್ ಕಬ್ಬನ್ ಪಾರ್ಕ್ ಠಾಣಾ ನಡೆದಿದೆ. ಸಿಸಿಬಿ ಎಸಿಪಿ ಮಹಾನಂದ ನೇತೃತ್ವದಲ್ಲಿ ಈ ದಾಳಿ ನಡೆದಿದೆ.