ನವದೆಹಲಿ: ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ತನ್ನ ಆಗಿನ ಬಾಸ್ ಆಂಡಿ ಬೈರನ್ ಜೊತೆಗಿನ ಆತ್ಮೀಯ ಕ್ಷಣದ ವೀಡಿಯೊ ವ್ಯಾಪಕವಾಗಿ ವೈರಲ್ ಬೆನ್ನಲ್ಲೇ ಕ್ರಿಸ್ಟಿನ್ ಕ್ಯಾಬಟ್ ದಾಂಪತ್ಯದಲ್ಲಿ ಬಿರುಕು ಮೂಡಿದೆ.
ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ತನ್ನ ಆಗಿನ ಬಾಸ್ ಆಂಡಿ ಬೈರನ್ ಜತೆಗೆ ಸಾಫ್ಟ್‌ವೇರ್ ಕಂಪನಿ ಆಸ್ಟ್ರೋನೊಮರ್‌ನ ಮಾಜಿ ಮಾನವ ಸಂಪನ್ಮೂಲ ಅಧಿಕಾರಿ ಕ್ರಿಸ್ಟಿನ್ ಕ್ಯಾಬಟ್ ಅಪ್ಪುಗೆಯ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿತು.
ಈ ವಿಡಿಯೋ ವ್ಯಾಪಕ ಪ್ರಸಾರವಾದ ವಾರಗಳ ನಂತರ, ತನ್ನ ಪತಿ ಆಂಡ್ರ್ಯೂ ಕ್ಯಾಬಟ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಂಗೀತ ಕಾರ್ಯಕ್ರಮದ ಕ್ಷಣದ ಕ್ಲಿಪ್ ತ್ವರಿತವಾಗಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳ ಅಲೆಯನ್ನು ಹುಟ್ಟುಹಾಕಿತು. ಆನ್‌ಲೈನ್ ಬಳಕೆದಾರರು ಈ ಜೋಡಿಯನ್ನು ಆಂಡಿ ಬೈರನ್ ಮತ್ತು ಕ್ರಿಸ್ಟಿನ್ ಕ್ಯಾಬಟ್ ಎಂದು ಗುರುತಿಸಿದ್ದಾರೆ. ಬೈರನ್ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಮೇಗನ್ ಕೆರ್ರಿಗನ್ ಅವರನ್ನು ವಿವಾಹವಾದರೆ, ಕ್ರಿಸ್ಟಿನ್ ಆಂಡ್ರ್ಯೂ ಕ್ಯಾಬಟ್ ಅವರನ್ನು ವಿವಾಹವಾಗಿದ್ದರು. ಆತ್ಮೀಯ ಕ್ಷಣದ ವಿಡಿಯೋ ವೈರಲ್ ಬೆನ್ನಲೇ ಕ್ರಿಸ್ಟಿನ್ ಹಾಗೂ ಕ್ಯಾಬಟ್ ದಾಂಪತ್ಯದಲ್ಲಿ ಬಿರುಕು ಮೂಡಿದೆ.
ಜುಲೈನಲ್ಲಿ ಮ್ಯಾಸಚೂಸೆಟ್ಸ್‌ನ ಜಿಲೆಟ್ ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊ, ಕ್ರೀಡಾಂಗಣದ ಕಿಸ್ ಕ್ಯಾಮ್‌ನಲ್ಲಿ ಇಬ್ಬರು ಅಪ್ಪುಗೆಯಿಂದ ರೋಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಿದ್ದರು.
ಕ್ರಿಸ್ಟಿನ್ ಕ್ಯಾಬಟ್ ಆಗಸ್ಟ್ 13 ರಂದು ನ್ಯೂ ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್‌ನಲ್ಲಿರುವ ನ್ಯಾಯಾಲಯದಲ್ಲಿ ವಿಚ್ಛೇದನ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ವರದಿ ಮಾಡಿದೆ.
ಕುಟುಂಬ ನಡೆಸುವ ವ್ಯವಹಾರ ಪ್ರೈವೇಟಿಯರ್ ರಮ್‌ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆಂಡ್ರ್ಯೂ ಕ್ಯಾಬಟ್‌ಗೆ ಇದು ಮೂರನೇ ವಿಚ್ಛೇದನವಾಗಲಿದೆ.