ನಗರದ ಟ್ರಾಫಿಕ್ ಪೊಲೀಸರಿಂದ ಹೊಸ ಟೋಯಿಂಗ್ ವ್ಯವಸ್ಥೆಯ ಚಿಂತನೆ ಶುರುವಾಗಿದೆ.ಸರ್ಕಾರಕ್ಕೆ ಖಾಸಗಿ ರಹಿತ ಟೋಯಿಂಗ್ ಗೆ ಟ್ರಾಫಿಕ್ ಪೊಲೀಸರು ಮನವಿ ಇಟ್ಟಿದ್ದಾರೆ.ಕಳೆದ ಮೀಟಿಂಗ್ ನಲ್ಲಿ ಗೃಹಮಂತ್ರಿ ಪರಮೇಶ್ವರ್ ಮುಂದೆ ಮನವಿ ಇಟ್ಟಿದ್ರು.ಬೆಂಗಳೂರಿನಲ್ಲಿ 10 ಸಂಚಾರಿ ಸಬ್ ಡಿವಿಷನ್ ಗಳನ್ನ ಪೊಲೀಸ್ ಇಲಾಖೆ ಹೊಂದಿದೆ.ಹತ್ತು ಸಬ್ ಡಿವಿಷನ್ ಗಳಿಗೂ ಒಂದೊಂದು ಟೋಯಿಂಗ್ ವಾಹನ ನೀಡುವಂತೆ ಮನವಿ ಮಾಡಲಾಗಿದೆ.ಟ್ರಾಫಿಕ್ ಸಿಬ್ಬಂಧಿಯನ್ನೇ ಬಳಸಿ ಟೋಯಿಂಗ್ ನಡೆಸಲು ಚಿಂತನೆ ನಡೆಸಲಾಗಿದೆ.ಇದಕ್ಕೆ ಸರ್ಕಾರದಿಂದ ಹತ್ತು ಟೋಯಿಂಗ್ ವಾಹನಗಳನ್ನ ನೀಡಲು ಮನವಿ ಮಾಡಲಾಗಿದೆ.
ಖಾಸಗಿ ಟೋಯಿಂಗ್ ವ್ಯವಸ್ಥೆಗೆ ವಿರೋಧಗಳು ವ್ಯಕ್ತವಾದ ಹಿನ್ನಲೆ ಈ ಹೊಸ ಚಿಂತನೆ ಮಾಡಲಾಗಿದೆ.ಒಂದು ವೇಳೆ ಸಂಚಾರಿ ಪೊಲೀಸರ ಹೊಸ ಟೋಯಿಂಗ್ ವ್ಯವಸ್ಥೆ ಜಾರಿಯಾದ್ರೆ ಏನಾಗುತ್ತೆ ಅದ್ರೆ ಲಕ್ಷ ಲಕ್ಷ ದುಡಿಯುತ್ತಿದ್ದ ಖಾಸಗಿ ಟೋಯಿಂಗ್ ಮಾಲೀಕರಿಗೆ ನಷ್ಟ ಉಂಟಾಗುತ್ತೆ.ಖಾಸಗಿ ಟೋಯಿಂಗ್ ಮಾಲೀಕರ ಜೇಬಿಗಿಳಿಯುತ್ತಿದ್ದ ಹಣ ಸರ್ಕಾರದ ಬೊಕ್ಕಸಕ್ಕೆ ತಲುಪುತ್ತೆ.ಸದ್ಯ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಿದೆ.ಇದಕ್ಕೆ ಟೋಯಿಂಗ್ ನಿಲ್ಲಿಸಿರುವುದು ಒಂದು ಪ್ರಮುಖ ಕಾರಣವಾಗಿದೆ.
ಟೋಯಿಂಗ್ ನಿಲ್ಲಿಸಿರೋ ಕಾರಣ ಎಲ್ಲೆಂದರಲ್ಲೇ ವಾಹನ ಸವಾರರು ಪಾರ್ಕ್ ಮಾಡ್ತಿದ್ದಾರೆ.ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ.ದೇಶದಲ್ಲೇ ಬೆಂಗಳೂರು ಟ್ರಾಫಿಕ್ ಸಿಟಿ ಎಂದು ಕುಖ್ಯಾತಿ ಗಳಿಸುತ್ತಿದೆ.ಹೀಗಾಗಿ ಹೊಸ ಟೋಯಿಂಗ್ ವ್ಯವಸ್ಥೆಯೆ ಚಿಂತನೆ ಸಂಚಾರಿ ಪೊಲೀಸರು ನಡೆಸ್ತಿದ್ದಾರೆ.ಸದ್ಯ ಟೋಯಿಂಗ್ ಗೆ ಪರ್ಯಾಯವಾಗಿ ವೀಲ್ ಲಾಕ್ ಸಿಸ್ಟಮ್ ಸಂಚಾರಿ ಪೊಲೀಸರು ಅಳವಡಿಸುತ್ತಿದ್ದಾರೆ.ಹೀಗಾಗಿ ಸಂಚಾರಿ ಪೊಲೀಸರ ಹೊಸ ಚಿಂತನೆಗೆ ಸರ್ಕಾರ ಮಣೆಯಾಕೋದು ಫಿಕ್ಸ್ ಆಗಿದೆ.ಆದ್ರೆ ಸರ್ಕಾರ ಯಾವಾಗಿಂದ ಇದನ್ನ ಜಾರಿಮಾಡುತ್ತೆ ಅನ್ನೋದೆ ಪ್ರಶ್ನೆಯಾಗಿದೆ.ಸದ್ಯ ಗೃಹ ಮಂತ್ರಿಗಳ ಮೀಟಿಂಗ್ ನಲ್ಲಿ ಹೊಸ ಟೋಯಿಂಗ್ ವ್ಯವಸ್ಥೆಯ ಚಿಂತನೆಗೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.