Select Your Language

Notifications

webdunia
webdunia
webdunia
webdunia

10 ದಿನಗಳ ಬಜೆಟ್ ಅಧಿವೇಶನ ಆರಂಭ

10 ದಿನಗಳ ಬಜೆಟ್ ಅಧಿವೇಶನ ಆರಂಭ
bangalore , ಮಂಗಳವಾರ, 4 ಜುಲೈ 2023 (17:11 IST)
ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳು ಸೇರಿ ಮುಂದಿನ 5 ವರ್ಷಗಳ ಸರ್ಕಾರ ಅಭಿವೃದ್ಧಿ ಕುರಿತಂತೆ ಪ್ರಸ್ತಾಪ ಮಾಡಲಾಗಿದೆ.  ಭಾಷಣದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಲ್ಲ.. ಒಟ್ಟು 24 ಪುಟಗಳ ಭಾಷಣ ಪ್ರತಿಯನ್ನು ರಾಜ್ಯಪಾಲರು ಓದಿದ್ರು.‌ ಮುಂದಿನ 5 ವರ್ಷಗಳಲ್ಲಿ ಬಾಕೀ ನೀರಾವರಿ ಯೋಜನೆಗಳನ್ನು ತಾರ್ಕಿಕ ಅಂತ್ಯ ಮುಟ್ಟಿಸುವುದಾಗಿದೆ ತಿಳಿಸಲಾಗಿದೆ. ಅದೇ ರೀತಿ ಕೃಷಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಭರವಸೆ ನೀಡಿದ್ದಾರೆ.. ದೇಶಕ್ಕೆ ಕರ್ನಾಟಕದ್ದೇ ಹೊಸ ಆಡಳಿತ ಮಾಡಲ್ ಪರಿಚಯ ಮಾಡೋದಾಗಿ ಉಲ್ಲೇಖ ಮಾಡಲಾಗಿದೆ.. ರಾಜ್ಯಪಾಲರ ಭಾಷಣ ನಂತರ ನಿಧನ ಹೊಂದಿದ ಗಣ್ಯರಿಗೆ ಸಂತಸ ಸೂಚಿಸಿದ್ರು. ಅಧಿವೇಶನ ಮುಂದೂಡಿಕೆ ಆಯ್ತು.ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಯುತ್ತದೆ.. ಈ ಚರ್ಚೆಯಲ್ಲೇ ಸರ್ಕಾರ ಗ್ಯಾರಂಟಿ ವಿಚಾರ ಮತ್ತು ವರ್ಗಾವಣೆ ದಂಧೆ ಸೇರಿ ಹಲವು ವಿಚಾರ ಪ್ರಸ್ತಾಪ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಸಿದ್ಧತೆ ನಡೆಸಿದೆ.. ಅದೇ ರೀತಿ ವಿರೋಧ ಪಕ್ಷಗಳ ಆರೋಪ ಟಕ್ಕರ್ ಕೊಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.. ಬಿಜೆಪಿ ಕಾಲದ ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ಎಂಪಿಎಂಸಿ ಕಾಯ್ದೆ ವಾಪಸ್ ಪಡೆಲು ಕಾಂಗ್ರೆಸ್ ತಯಾರಿ ನಡೆಸಿದೆ. ಸಿಎಂ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ.. ನಂತರ ಬಜೆಟ್ ಮೇಲೆ ಚರ್ಚೆ ಉಭಯ ಸದನದಲ್ಲಿ ಚರ್ಚೆ ನಡೆಯುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ ಉಚಿತ ಬಸ್ ನಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ