Publish Date: Tue, 04 Jul 2023 (15:14 IST)
Updated Date: Tue, 04 Jul 2023 (16:28 IST)
ವಿಜಯಪುರ ತಾಲೂಕಿನ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಮಿಶ್ರಣವಾಗುತ್ತಿರುವ ಕಾರಣ ನೀರು ಸಂಪೂರ್ಣವಾಗಿ ಗಬ್ಬೆದ್ದು ನಾರುತ್ತಿದೆ. ಇತ್ತೀಚೆಗೆ ನಡೆದ ಮೊದಲ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಅವರು ಇದೇ ಕೆರೆಯ ವಿಚಾರವನ್ನು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದರು.. ಆದರೆ ಇದುವರೆಗೆ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಬರುವುದು ಮಾತ್ರ ನಿಂತಿಲ್ಲ.. ಒಂದು ಸಮಯದಲ್ಲಿ ಈ ಕೆರೆಯ ನೀರನ್ನು ಈ ಸುತ್ತಮುತ್ತಲಿನ ತಾಂಡಾದ ಜನರು ಕುಡಿಯಲು ಬಳಸುತ್ತಿದ್ದರು.. ಆದರೆ ಇಂದು ಈ ನೀರಿನ ಸಮೀಪ ಹೋಗುವುದಕ್ಕೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಕೆರೆ ಮಲಿನಮಯವಾಗಿದೆ