Select Your Language

Notifications

webdunia
webdunia
webdunia
webdunia

ಅರಣ್ಯ ಇಲಾಖೆ ರೆಸಾರ್ಟ್‌ಗೆ ಬೀಗ

The forest department has locked the resort
ಹಾಸನ , ಮಂಗಳವಾರ, 4 ಜುಲೈ 2023 (15:38 IST)
ಅರಣ್ಯ ಭೂಮಿ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡಿದ್ದ ಹಿನ್ನೆಲೆ, ಅರಣ್ಯ ಇಲಾಖೆ ರೆಸಾರ್ಟ್‌ಗೆ ಬೀಗ ಹಾಕಿದ್ದಾರೆ. ಹಾಸನ ಅರಣ್ಯ ಇಲಾಖೆಯಿಂದ ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ಮಂಕನಹಳ್ಳಿ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಒತ್ತುವರಿ ತೆರವು ಕಾರ್ಯ ನಡೆದಿತ್ತು. ಪಾಂಡು, ಶರಣಪ್ಪ ಪಾಟೀಲ್, ಪುಟ್ಟರಾಜ್ ಎಂಬುವವರು ಒತ್ತುವರಿ ಮಾಡಿದ್ದರು. 3 ಎಕರೆ 17 ಗುಂಟೆ ಡೀಮ್ಡ್ ಫಾರೆಸ್ಟ್ ಒತ್ತುವರಿ ಮಾಡಿ ವ್ಯಕ್ತಿಗಳು ರೆಸಾರ್ಟ್ ನಿರ್ಮಿಸಿದ್ರು. ವಲಯ ಅರಣ್ಯ ಇಲಾಖೆ ಅಧಿಕಾರಿಗಳು ತೆರವಿಗೆ ಈ ಹಿಂದೆ ಆದೇಶಿಸಿದ್ರು. ಒತ್ತುವರಿದಾರರು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ರು. ಅರಣ್ಯ ಸಂರಕ್ಷಣಾಧಿಕಾರಿ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು. ಮೇಲ್ಮನವಿ ಪ್ರಾಧಿಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಒತ್ತುವರಿ ಡೀಮ್ಡ್ ಫಾರೆಸ್ಟ್ ತೆರವಿಗೆ ಆದೇಶಿಸಲಾಗಿದೆ. ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ, ಮೂಲರೂಪ ಹಾನಿಗೊಳಿಸಿದ್ದಾರೆಂದು ಉಲ್ಲೇಖ ಮಾಡಲಾಗಿದೆ. DFO ರಮೇಶ್, ACF ಗಳಾದ ಪ್ರಭು, ಸುರೇಶ್, ಮತ್ತು ಅಧಿಕಾರಿಗಳು ಡೀಮ್ಡ್ ಫಾರೆಸ್ಟ್ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೈನೇಜ್ ನೀರಿನಿಂದ ಕೆರೆ ಮಲಿನಮಯ​​