Publish Date: Tue, 11 Aug 2020 (19:09 IST)
Updated Date: Tue, 11 Aug 2020 (19:12 IST)
ಗರ್ಭಿಣಿಯೊಬ್ಬರು ಜನ್ಮ ನೀಡಿದ ಮಗುವಿನ ತೂಕದ ಬಗ್ಗೆ ಕೇಳಿದರೆ ನೀವು ಖಂಡಿತ ಉದ್ಘಾರ ತೆಗೆಯುತ್ತೀರಾ…
ಬೀದರ್ ಜಿಲ್ಲೆಯ ಹುಮನಾಬಾದ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮಗುವಿನ ತೂಕ ನೋಡಿ ವೈದ್ಯರು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವೈದ್ಯರು ಮತ್ತು ಹೆರಿಗೆ ಸಿಬ್ಬಂದಿ ನಾರ್ಮಲ್ ಹೆರಿಗೆ ಮೂಲಕ ಕೈಗೊಂಡಿದ್ದು, 5 ಕಿಲೋ ತೂಕ ಮಗು ಜನನವಾಗಿದೆ.
ಉತ್ತರಕರ್ನಾಟಕದ ಮತ್ತು ಹುಮನಾಬಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚು ತೂಕವಿರುವ ಮಗುವಿನ ಜನನವಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ತಿಳಿಸಿದ್ದಾರೆ.