Select Your Language

Notifications

webdunia
webdunia
webdunia
webdunia

ಆಗಸ್ಟ್ 15 ರಂದು ಪೊಲೀಸ್ ಮೈದಾನಕ್ಕೆ ಪ್ರವೇಶ ಇಲ್ಲ

ಆಗಸ್ಟ್ 15
ಪ್ರತಿವರ್ಷ ಆಗಸ್ಟ್ 15 ಬಂದರೆ ಸಾಕು ಎಲ್ಲ ಸಾರ್ವಜನಿಕರು, ಶಾಲಾ ಕಾಲೇಜ್ ಗಳ ವಿದ್ಯಾರ್ಥಿಗಳು ಪೊಲೀಸ್ ಮೈದಾನಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ನೋ ಎಂಟ್ರಿ.

ಕೋವಿಡ್-19 ಸೋಂಕು ಇರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ  ಚಿತ್ರದುರ್ಗ ಜಿಲ್ಲಾ ಆಡಳಿತದಿಂದ ಆಗಸ್ಟ್ 15 ರಂದು  ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಾವಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ.

ಆದರೆ ಈ ಕಾರ್ಯಕ್ರಮದಲ್ಲಿ ಆಹ್ವಾನಿತರನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಬಾರದು. 

ಕಾರ್ಯಕ್ರಮದ ವೀಕ್ಷಣೆಗೆ ದೂರದರ್ಶನ, ಕೇಬಲ್ ಟಿ.ವಿ, ಆಕಾಶವಾಣಿ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ : ಸಚಿವ ಹೇಳಿದ್ದೇನು?