Select Your Language

Notifications

webdunia
webdunia
webdunia
webdunia

ಕೊರೊನಾ ನಕಲಿ ಪಾಸ್ ಹೊಂದಿದ್ದರೆ ನಿಮಗೆ ಕಾದಿದೆ ಆಪತ್ತು

ಕೊರೊನಾ ನಕಲಿ ಪಾಸ್ ಹೊಂದಿದ್ದರೆ ನಿಮಗೆ ಕಾದಿದೆ ಆಪತ್ತು
ಹಾವೇರಿ , ಶುಕ್ರವಾರ, 17 ಏಪ್ರಿಲ್ 2020 (19:47 IST)
ಚೆಕ್ ಪೋಸ್ಟ್ ಗಳಲ್ಲಿ ನಕಲಿ ಪಾಸ್, ಅವಧಿ ಮೀರಿದ ಪಾಸ್ ಗಳ ಹಾವಳಿ ಸದ್ದು ಜೋರಾಗುತ್ತಿದೆ.

ಹಾವೇರಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಚೆಕ್‍ಪೋಸ್ಟ್‍ಗಳಲ್ಲಿ ಸಂಚರಿಸುವ ಪ್ರತಿ ವಾಹನಗಳ ಮೇಲೆ ತೀವ್ರ ನಿಗಾವಹಿಸಬೇಕು. ಕೆಲವರು ನಕಲಿ ಪಾಸ್ ಹಾಗೂ ಅವಧಿ ಮೀರಿದ ಪಾಸ್‍ಗಳನ್ನು ಬಳಸಿಕೊಂಡು ಸಂಚರಿಸುವುದು ಪತ್ತೆಯಾಗಿದೆ.

ಇಂತಹ ಪ್ರಕರಣಗಳು ಕಂಡುಬಂದರೆ ವಾಹನಗಳನ್ನು ವಶಕ್ಕೆ ಪಡೆಯುವಂತೆ ತಹಶೀಲ್ದಾರಗಳಿಗೆ ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಸೂಚನೆ ನೀಡಿದ್ದಾರೆ.

ಚೆಕ್‍ಪೋಸ್ಟ್‍ಗಳಲ್ಲಿ ಪ್ರತಿ ವಾಹನಗಳ ಪಾಸ್‍ಗಳನ್ನು ಪರಿಶೀಲಿಸಬೇಕು ಹಾಗೂ  ಒಂದೊಮ್ಮೆ ಸುಳ್ಳು ದಾಖಲಾತಿ ನೀಡಿ ಪಾಸು ಹೊಂದಿದ್ದರೆ ಅಂತಹ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳಬೇಕು. ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ ನೀಡಲಾಗಿದೆ.

ಅನುಮತಿ ನೀಡಲಾದ ಸರಕು ಸಾಗಾಣಿಕೆ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಾಗಾಣಿಕೆ ಮಾಡಿದಲ್ಲಿ ವಾಹನ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಚೆಕ್ ಪೋಸ್ಟ್ ಬಿಟ್ಟು ಬೇರೆ ದಾರಿಯಿಂದ ಜನ ಬಂದ್ರೆ ಹೀಗೆ ಮಾಡಿ ಎಂದ ಡಿಸಿ