Select Your Language

Notifications

webdunia
webdunia
webdunia
webdunia

ಚೆಕ್ ಪೋಸ್ಟ್ ಬಿಟ್ಟು ಬೇರೆ ದಾರಿಯಿಂದ ಜನ ಬಂದ್ರೆ ಹೀಗೆ ಮಾಡಿ ಎಂದ ಡಿಸಿ

ಚೆಕ್ ಪೋಸ್ಟ್ ಬಿಟ್ಟು ಬೇರೆ ದಾರಿಯಿಂದ ಜನ ಬಂದ್ರೆ ಹೀಗೆ ಮಾಡಿ ಎಂದ ಡಿಸಿ
ಹಾಸನ , ಶುಕ್ರವಾರ, 17 ಏಪ್ರಿಲ್ 2020 (19:40 IST)
ಚೆಕ್ ಪೊಸ್ಟ್ ಅಳವಡಿಸಿರುವ ರಸ್ತೆಗಳನ್ನು ಹೊರತುಪಡಿಸಿ ಸಣ್ಣ ದಾರಿಗಳ ಮೂಲಕ ಹೊರ ಜಿಲ್ಲೆಗಳಿಂದ ಜನರು ಬರುತ್ತಿದ್ದು ಅವರಿಗೆ ಹೀಗೆ ಮಾಡಿ ಅಂತ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಚೆಕ್ ಪೋಸ್ಟ್ ಕಣ್ಣುತಪ್ಪಿಸಿ ಸಣ್ಣ ದಾರಿಗಳ ಮೂಲಕ ಪ್ರತಿದಿನ 80 ರಿಂದ 100 ಜನರು ಹಾಸನ ಜಿಲ್ಲೆಯೊಳಗೆ ಬರುತ್ತಿದ್ದಾರೆ. ಅಂತವರನ್ನು ಪತ್ತೆ ಹಚ್ಚಿ ಮುದ್ರೆ ಹಾಕಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಹೊರ ಜಿಲ್ಲೆಗಳಿಂದ ಬರುತ್ತಿರುವವರ ಬಗ್ಗೆ ಪ್ರತಿದಿನ ಮಾಹಿತಿ ಕಲೆ ಹಾಕಿ ವರದಿ ನೀಡಬೇಕು. ಏ. 13 ರಿಂದ ಈಚೆಗೆ ಜಿಲ್ಲೆಯೊಳಗೆ ಬಂದವರೆಲ್ಲರಿಗೂ ಕಡ್ಡಾಯವಾಗಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಿ ಎಂದು ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 




Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್‍ ಡೌನ್ ನಡುವೆ ಮದುವೆ : ನವಜೋಡಿ ಮಾಡಿದ್ದೇನು?