Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಹಣದ ನೆರವು- ಆರ್ ಬಿಐ ಘೋಷಣೆ

ನವದೆಹಲಿ
ನವದೆಹಲಿ , ಶುಕ್ರವಾರ, 17 ಏಪ್ರಿಲ್ 2020 (10:54 IST)
ನವದೆಹಲಿ : ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಹಣದ ನೆರವು ನೀಡುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.


ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,  ಕೊರೊನಾ ವೈರಸ್ ವಿರುದ್ಧ ಹೋರಾಡಲು ಶೇ.60ಕ್ಕಿಂತ ಹೆಚ್ಚು ಹಣಕಾಸಿನ ನೆರವು ನೀಡಲಾಗುವುದು. ರಿವರ್ಸ್ ರೆಪೋ ಬಡ್ಡಿದರ 3.75ಕ್ಕೆ ಇಳಿಕೆಯಾಗಿದೆ. ರೆಪೋ ದರದಲ್ಲಿ ಬದಲಾವಣೆ ಇಲ್ಲ. ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ಆರ್ ಬಿಐನಿಂದ 50 ಸಾವಿರ ಕೋಟಿ ರೂ. ನೆರವು. ನಬಾರ್ಡ್ ಮೂಲಕ 25 ಸಾವಿರ ಕೋಟಿ ನೆರವು ನೀಡುವುದಾಗಿ ತಿಳಿಸಿದ್ದಾರೆ.


ಹಾಗೇ ಎಸ್ಐಡಿಬಿಐಗೆ 15 ಸಾವಿರ ಕೋಟಿ ರೂ. ಮೀಸಲು, ಎನ್ ಹೆಚ್ ಬಿಗೆ 10ಸಾವಿರ ಕೋಟಿ ರೂ. ಮೀಸಲು , ಹಣದ ಹರಿವು ಹೆಚ್ಚಿಸಲು ಗ್ರಾಮೀಣ ಮತ್ತು ಸಹಕಾರ ಬ್ಯಾಂಕ್ ಗಳಿಗೆ  ನೆರವು ನೀಡುವುದಾಗಿ ಆರ್ ಬಿಐ ಮಹತ್ವದ ಘೋಷಣೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರೆಷ್ಟು ಮಂದಿ ಗೊತ್ತಾ?