Select Your Language

Notifications

webdunia
webdunia
webdunia
webdunia

ಕೊರೊನಾ ಕೇಸ್ ಹೆಚ್ಚಳ : ಜಿಲ್ಲಾ ಕೇಂದ್ರ ಸಂಪೂರ್ಣ ಸೀಲ್ ಡೌನ್

ಕೊರೊನಾ ಕೇಸ್ ಹೆಚ್ಚಳ : ಜಿಲ್ಲಾ ಕೇಂದ್ರ ಸಂಪೂರ್ಣ ಸೀಲ್ ಡೌನ್
ಚಿಕ್ಕಬಳ್ಳಾಪುರ , ಶುಕ್ರವಾರ, 17 ಏಪ್ರಿಲ್ 2020 (19:17 IST)
ಕೊರೊನಾ ವೈರಸ್ ಕೇಸ್ ಹೆಚ್ಚಾದ ಪರಿಣಾಮ ಜಿಲ್ಲಾ ಕೇಂದ್ರದ ನಗರವನ್ನೇ ಡಿಸಿವೊಬ್ಬರು ಸೀಲ್ ಡೌನ್ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಹೊಸದಾಗಿ ಮೂರು ಕೊರೊನಾ ಕೇಸ್ ದೃಢವಾದ ಹಿನ್ನಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ, 17 ನೇ ವಾರ್ಡಿನಲ್ಲಿ ಕೊರೊನಾ ಗೆ ಮೃತನಾದ ವೃದ್ಧನ ಕೊನೆಯ ಮಗ ಹಾಗೂ ಎದುರುಗಡೆ ಮನೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ವೃದ್ಧ ಮೃತಪಟ್ಟಾಗ 17ನೇ ವಾರ್ಡು ಸೇರಿದಂತೆ ಅಕ್ಕ ಪಕ್ಕದ ನಾಲ್ಕು  ವಾರ್ಡುಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗಿತ್ತು. ಈಗ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಡೀ ಚಿಕ್ಕಬಳ್ಳಾಪುರ ನಗರವನ್ನೇ ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ. ಆಯಾ ವಾರ್ಡುವಾರು ಸ್ವಯಂಸೇವಕರ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ  ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಇದ್ದರೂ ಮೀನು ಪ್ರಿಯರು ಫುಲ್ ಖುಷ್