Select Your Language

Notifications

webdunia
webdunia
webdunia
webdunia

ರೈತರೇ ಆಂಧ್ರ, ಮಹಾರಾಷ್ಟ್ರ, ತಮಿಳುನಾಡಿಗೆ ಇದನ್ನು ಕಳಿಸಲೇಬೇಡಿ ಎಂದ ಡಿಸಿ

ರೈತರೇ ಆಂಧ್ರ, ಮಹಾರಾಷ್ಟ್ರ, ತಮಿಳುನಾಡಿಗೆ ಇದನ್ನು ಕಳಿಸಲೇಬೇಡಿ ಎಂದ ಡಿಸಿ
ಹಾಸನ , ಗುರುವಾರ, 16 ಏಪ್ರಿಲ್ 2020 (15:32 IST)
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಇದನ್ನು ಕಳಿಸಲೇಬೇಡಿ ಅಂತ ಡಿಸಿ ಖಡಕ್ಕಾಗಿ ಬೆಳೆಗಾರರಿಗೆ ಹೇಳಿದ್ದಾರೆ.


ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲೆಯಲ್ಲಿ ಕೊಬ್ಬರಿ ವಹಿವಾಟುದಾರರು ಹಾಗೂ ರೈತರು ತಮ್ಮ ಬಳಿ ದಾಸ್ತಾನಿನಲ್ಲಿರುವ ಕೊಬ್ಬರಿಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಇತರೆ ರಾಜ್ಯಗಳಿಗೆ ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಈ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೊರ ರಾಜ್ಯಗಳಿಗೆ ಕೊಬ್ಬರಿ ಸಾಗಾಣೆ ಹಾಗೂ ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್. ಗಿರೀಶ್  ಆದೇಶಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಸತಿ ಶಾಲೆಗಳಲ್ಲಿ ಅಂಥ ಕೆಲಸ ಆಗ್ತಿದೆ ಎಂದ ಡಿಸಿಎಂ