Publish Date: Sat, 08 Apr 2023 (09:20 IST)
Updated Date: Sat, 08 Apr 2023 (09:56 IST)
ಚಿಕ್ಕಮಗಳೂರು : ಬೊಮ್ಮಣ್ಣ (ಬಸವರಾಜ ಬೊಮ್ಮಾಯಿ) ನಮ್ಮ ಕೆ.ಎಂ.ಎಫ್ ಅನ್ನು ಗುಜರಾತಿನ ಅಮೂಲ್ ಗೆ ಸೇರಿಸಲು ಹೊರಟಿದ್ದೀರಾ, ಇದಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ಹಾಲಿನ ಕ್ರಾಂತಿ ಆಗಲ್ಲ, ರಕ್ತ ಕ್ರಾಂತಿ ಮಾಡಬೇಕಾಗುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಕಡೂರಿನಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ನಂದಿನಿ ನಮ್ಮ ಕರ್ನಾಟಕದ ಕನ್ನಡಿಗರ ಸ್ವತ್ತು. ಗುಜರಾತ್ ಮಾರ್ವಾಡಿಗಳಿಗೆ ಮಾರಾಟ ಮಾಡಲು ನಾವು ತಯಾರಿಲ್ಲ. ಬೊಮ್ಮಾಯಿ ಹಾಗೂ ಅಮಿತ್ ಶಾ ಏನಾದರೂ ಮಾಡಿ ಗುಜರಾತ್ ಗೆ ಸೇರಿಸಲು ಹೊರಟಿದ್ದಾರೆ. ಆದರೆ ಆಗಲ್ಲ, ಆಗೋಕೆ ನಾವು ಬಿಡೋದಿಲ್ಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಅದಾನಿ, ಅಂಬಾನಿ, ಲೋಪಾನಿ, ಕಲ್ಯಾಣಿ, ಚುಂಚಾಣಿ ಯಾವ ಸುಡುಗಾಡಿದಾವೋ ಗೊತ್ತಿಲ್ಲ. ಮೋದಿ ಹೇಳುತ್ತಾರೆ ಗುಜರಾತ್ ಮಾಡೆಲ್ ಅಂತ. ಸ್ವಾಮಿ.. ನಮ್ಮೂರಲ್ಲಿ ಪಾನಿಪುರಿ ಮಾರೋನು ಗುಜರಾತ್ ಅವನೇ ಎಂದು ಪ್ರಧಾನಿ ಮೋದಿ ವಿರುದ್ಧ ಲೇವಡಿ ಮಾಡಿದ್ದಾರೆ. ನಿಮ್ಮ ಭಾಗ ನಮಗೆ ಬೇಕಾಗಿಲ್ಲ, ಕನ್ನಡಿಗರು ಕೊಡುವವರು, ಬೇಡುವವರಲ್ಲ. ನಿಮ್ಮ ಯೋಚನೆಯನ್ನ ಕೈಬಿಡಿ ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಿಜೆಪಿ ಎಚ್ಚರಿಕೆ ನೀಡಿದ್ದಾರೆ.