ಸಿಲಿಕಾನ್ ಸಿಟಿಗೆ ಈಗ ಕೆಎಂಎಫ್ ಬಿಗ್ ಶಾಕ್ ಕೊಟ್ಟಿದೆ. ನಂದಿನಿ ಹಾಲಿ ನ ಕೊರತೆ ಈಗ ಎದುರಾಗಿದ್ದು, ನಂದಿನಿ ಬೂತ್ನವರಿಗೆ ಕಿರಿಕಿರಿ ಆರಂಭವಾಗಿದೆ. ಅತ್ತ ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರು ಪರದಾಟ ಪಡುವ ಪರಿಸ್ಥಿತಿ ಎದುರಾಗಿದೆ .ಏಕಾಏಕಿ ನಂದಿನಿ ಹಾಲು ಪ್ರತಿನಿತ್ಯ ಬೆಂಗಳೂರಿಗೆ 4 ಲಕ್ಷ ಲೀಟರ್ ಹಾಲಿನ ಕೊರತೆಯುಂಟಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಾಮನ್ ಅಂತಾ ಅಂದುಕೊಂಡ್ರೇ ಇದ್ಕಕೆ ಕಾರಣ ಬೇರೆಯೇ ಅಂತಿದೆ ಬಮೂಲ್. ಇನ್ನೊಂದಡೆ ನಂದಿನಿ ಬೂತ್ಗಳು ಸುಮಾರು ಮೂರುಸಾವಿರ ಲೀಟರ್ ಹಾಲು ಕೇಳಿದ್ರೆ ಪೂರೈಕೆಯಾಗ್ತಾ ಇರೋದು 1500 ಲೀಟರ್ ಅಂತೆ. ಮೊದಲೇ ಒಂದು ತಿಂಗಳ ಅಡ್ವಾನ್ಸ್ ಕೊಟ್ಟ ಗ್ರಾಹಕರು ಇದರಿಂದ ತೊಂದರೆಗಿದಗ್ತಿದ್ದಾರೆ, ಇನ್ನೂ ಹೋಟೆಲ್ ಮಾಲೀಕರು, ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದದ್ದು ಸದ್ಯ ಬೆಂಗಳೂರಿಗೆ 22 ಲಕ್ಷ ಲೀಟರ್ ಹಾಲಿಗೆ ಡಿಮ್ಯಾಂಡ್ ಇದೆ. ಆದರೆ 18ಲಕ್ಷ ಲೀಟರ್ ಹಾಲು ವಿತರಣೆಯಾಗ್ತಿದ್ದು , ಹೊರರಾಜ್ಯಗಳಿಗೆ ಪೂರೈಕೆಯಾಘುತ್ತಿರುವ ಹಾಲನ್ನು ನಿಲ್ಲಿಸಬೇಕೆಂದು ಪಿ ಸಿ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ .