Publish Date: Sun, 12 Mar 2023 (14:34 IST)
Updated Date: Sun, 12 Mar 2023 (14:40 IST)
ಎರಡನೇ ಪತಿಯಿಂದ ಪತ್ನಿಯ ಮೊದಲ ಮಗನ ಹತ್ಯೆ ನಡೆದಿದೆ.ಪುಷ್ಪ ಎಂಬಾಕೆ ಸಂಪತ್ ಎಂಬಾತನನ್ನು ಎರಡನೇ ಮದುವೆ ಆಗಿದ್ದಳು.ಕಳೆದ ಒಂದು ವರ್ಷದ ಹಿಂದೆ ಪುಷ್ಪ ಮದುವೆ ಆಗಿದ್ದಳು. ಆಕೆಯ ಮೊದಲ ಪತಿಗೆ ಎರಡು ಮಕ್ಕಳಿದ್ದರು.ಆ ಮಕ್ಕಳ ಪೈಕಿ ಮೊದಲ ಮಗು ಚೇತನ್ ನನ್ನು ಸಂಪತ್ ಹತ್ಯೆ ಮಾಡಿದ್ದಾನೆ.
ಪುಷ್ಪ ಮತ್ತು ಸಂಪತ್ ನಡುವೆ ಗಲಾಟೆ ನಡೆದಿದೆ.ಪತ್ನಿ ಜೊತೆಗೆ ಬೇರೆ ಸಂಬಂದ ಇರಬಹುದು ಎಂದು ಗಲಾಟೆ ಮಾಡ್ತಿದ್ದ.ಈ ಕಾರಣಕ್ಕೆ ಎರಡನೇ ಪತಿ ಯಿಂದ ಪುಷ್ಪ ದೂರವಾಗಿದ್ದಳು.ಹೀಗಾಗಿ ಪುಷ್ಪ ಮೇಲೆ ಸಂಪತ್ ಕೋಪ ಮಾಡಿಕೊಂಡಿದ್ದ. ಪುಷ್ಪ ಮಗುವನ್ನು ಬಾಗಲೂರಿನ ವಸತಿ ಶಾಲೆಯಲ್ಲಿ ಇರಿಸಿದ್ದಳು.ಕಳೆದ ಫೆಬ್ರವರಿ ಇಪ್ಪತ್ತರಂದು ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಿದ್ದ.ಹೊಸಕೋಟೆ ಬಳಿಯಲ್ಲಿ ಬಿರಿಯಾನಿ ಕೊಡಿಸಿದ್ದ.ನಂತ್ರ ಪುಷ್ಪಗೆ ಕರೆ ಮಾಡಿದ್ದ, ಪುಷ್ಪ ಸ್ಪಂದಿಸದೆ ಇದ್ದಾಗ ಮಗುವನ್ನ ಸಂಪತ್ ಕೊಲೆ ಮಾಡಿದ.ಪುಷ್ಪ ಮೇಲಿನ ಕೋಪಕ್ಕೆ ಕೊಲೆ ಮಾಡಿ ಕೆ ಜಿ ಎಫ್ ಬಳಿಯ ಕ್ಯಾಸಂಬಳ್ಳಿಯ ರಾಮಪುರ ಕೆರೆಗೆ ಆರೋಪಿ ಸಂಪತ್ ಬಿಸಾಕಿದ್ದ.ನಂತರ ಸಂಪತ್ ನನ್ನು ಪ್ರಶ್ನೆ ಮಾಡಲು ಹೋದಾಗ ಅತ್ಮಹತ್ಯೆ ಯತ್ನ ಮಾಡಿದ್ದ.ವಿಷ ಕುಡಿದು ಅಸ್ಪತ್ರೆಗೆ ದಾಖಲಾಗಿದ್ದ.ಈಗ ಸಂಪತ್ ಗುಣಮುಖ ವಾದ ಬಳಿಕ ಕೊಲೆ ಮಾಡಿದ್ದು ಬೆಳಕಿಗೆ ಬಂದಿದ್ದು,ಬಾಗಲೂರು ಪೊಲೀಸರಿಂದ ಆರೋಪಿ ಸಂಪತ್ ನನ್ನ ಅರೆಸ್ಟ್ ಮಾಡಲಾಗಿದೆ.
geetha
Publish Date: Sun, 12 Mar 2023 (14:34 IST)
Updated Date: Sun, 12 Mar 2023 (14:40 IST)