ರಾಜ್ಯ ವಿಧಾನಸಭಾ ಅವಧಿಯು ಮೇ 24ಕ್ಕೆ ಅಂತ್ಯವಾಗಲಿದೆ.ರಾಜ್ಯದಲ್ಲಿ ಒಟ್ಟು ಜನಸಂಖ್ಯೆ 6.1 ಕೋಟಿ ಇದ್ದು, ಇದರಲ್ಲಿ ಮಹಿಳೆಯರು 3.01 ಕೋಟಿ ಹಾಗೂ ಪುರುಷರು 3.01 ಕೋಟಿ ಇದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಯ ಪರಿಶೀಲನೆಯ ಕುರಿತು ಚುನಾವಣಾ ಆಯೋಗವು ಮಹತ್ವದ ಸುದ್ದಿಗೋಷ್ಠಿ ನಡೆಸಿತು. ರಾಜೀವ್ ಕುಮಾರ್ ಮಾತನಾಡಿ, ಈ ಬಾರಿ 9.17 ಲಕ್ಷ ಹೊಸ ಮತದಾರರು ಇದ್ದು, 1.25 ಲಕ್ಷ 17 ವರ್ಷಕ್ಕೂ ಮೇಲ್ಪಟ್ಟ ಯುವಕರು ಮುಂಚಿತವಾಗಿ ಮತದಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು....ಇದೇ ವೇಳೆ 42,756 ತೃತೀಯ ಲಿಂಗಿಗಳು ಇದ್ದು, 41,312 ಜನರು ಮತದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 80 ವರ್ಷಕ್ಕೂ ಮೇಲ್ಪಟ್ಟವರು 12.15 ಲಕ್ಷ ಜನ ಮತದಾರರು ಇದ್ದಾರೆ. ಈ ಹಿಂದೆ 2018ರಲ್ಲಿ ಹಿರಿಯ ಮತದಾರರ ಸಂಖ್ಯೆ 9.17 ಇತ್ತು. ಇದರಲ್ಲಿ ಶೇ.32.5ರಷ್ಟು ಏರಿಕೆ ಕಂಡಿದೆ. ಜೊತೆಗೆ ವಿಶೇಷಚೇತನ ಮತದಾರರ ಸಂಖ್ಯೆ 5.55 ಲಕ್ಷ ಇದ್ದು, 2018ರಲ್ಲಿ ಇವರ ಸಂಖ್ಯೆ 2.15 ಲಕ್ಷ ಮಾತ್ರ ಇತ್ತು ಎಂದು ವಿವರಿಸಿದರು