Select Your Language

Notifications

webdunia
webdunia
webdunia
webdunia

ಭೈರತಿ ಸುರೇಶ್ ಮನೆಗೆ ದಾಳಿ ನಡೆಸಿದರೆ ಮುಡಾ ಹಗರಣದ ದಾಖಲೆ ಸಿಗಲಿದೆ: ಶ್ರೀವತ್ಸ

Urban Development Minister Bhairati Suresh

Sampriya

ಮೈಸೂರು , ಶನಿವಾರ, 19 ಅಕ್ಟೋಬರ್ 2024 (14:15 IST)
Photo Courtesy X
ಮೈಸೂರು: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮನೆ ಮೇಲೆ ದಾಳಿ ನಡೆಸಿದರೆ ಮುಡಾ ಹಗರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸಿಗಲಿವೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಆರೋಪಿಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದ ಬಹುತೇಕ ದಾಖಲೆಗಳು ಈಗಾಗಲೇ ಬೆಂಗಳೂರಿಗೆ ರವಾನೆ ಆಗಿವೆ. ಹೀಗಾಗಿ, ಹಗರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಮುಡಾ ಕಚೇರಿಯಲ್ಲಿ ಇ.ಡಿ.ಗೆ ಸಿಕ್ಕಿಲ್ಲ. ವೈಟ್ನರ್ ಹಾಕಿದ ದಾಖಲೆ ಮುಡಾ ಕಡತದಿಂದ ನಾಪತ್ತೆ ಆಗಿದೆ. ಇನ್ನೂ ಹತ್ತು ಹಲವು ದಾಖಲೆಗಳ ಕಡತಗಳೇ ಸಿಗುತ್ತಿಲ್ಲ ಎಂಬ ಮಾತಿದೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾರು ಯಾರ ಮೇಲೆ ಅನುಮಾನ ಇದೆಯೇ ಅವರೆಲ್ಲರ ಮನೆ ಮೇಲೆ ಇ.ಡಿ. ಅಧಿಕಾರಿಗಳು ಶೋಧ ನಡೆಸಬಹುದು ಎಂದು ಹೇಳಿದರು.

ಲೋಕಾಯುಕ್ತದ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ತನ್ನ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸುವುದು ಸಾಧ್ಯವಿಲ್ಲ. ಹೀಗಾಗಿಯೇ ಇ.ಡಿ. ದಾಳಿ ಮಾಡಿ ತನಿಖೆ ನಡೆಸಿದೆ. ಇದು ನಿರೀಕ್ಷಿತ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಸೈಟು ಹೊಡೆದ ಆರೋಪ