ಬೆಂಗಳೂರು: ಸಾರ್ವಜನಿಕರೇ ಶಾಕ್ ಆಗುವ ಸುದ್ದಿಯಿದು. ನೀವು ತಿನ್ನುವ ಇಡ್ಲಿಯಿಂದಲೂ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ.
ಹಲವರಿಗೆ ಇಡ್ಲಿ ಅಚ್ಚುಮೆಚ್ಚಿನ ತಿಂಡಿ. ಅದರಲ್ಲೂ ರಸ್ತೆ ಬದಿಗಳಲ್ಲಿ ಸಿಗುವ ತಟ್ಟೆ ಇಡ್ಲಿ ಎಂದರೆ ತುಂಬಾ ಇಷ್ಟ. ಆದರೆ ಈ ರೀತಿ ಮಾರಾಟ ಮಾಡುವ ಇಡ್ಲಿಯಿಂದಲೇ ನಿಮಗೆ ಕ್ಯಾನ್ಸರ್ ನಂತಹ ಮಹಾಮಾರಿ ಬರುವ ಸಾಧ್ಯತೆಯಿದೆ ಎಂದು ವರದಿಯೊಂದು ಹೇಳಿದೆ.
ಬೆಂಗಳೂರಿನ ಹಲವೆಡೆ ಇಡ್ಲಿ ತಯಾರಿಸಲು ಬಟ್ಟೆ ಬದಲು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಅಲ್ಲದೆ ಪ್ಯಾಕ್ ಮಾಡಿಕೊಡಲೂ ಪ್ಲಾಸ್ಟಿಕ್ ಕವರ್ ಬಳಸಲಾಗುತ್ತಿದೆ. ಇದು ಕ್ಯಾನ್ಸರ್ ಕಾರಕ ಅಂಶ ಹೊರಸೂಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಸ್ವತಃ ಆಹಾರ ಇಲಾಖೆಯೇ ಈ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿ ಇಡ್ಲಿ ತಯಾರಿಸುವ ಘಟಕಗಳನ್ನು ಪರಿಶೀಲಿಸಿ ಈ ವರದಿ ತಯಾರಿಸಲಾಗಿದೆ. ಹೀಗಾಗಿ ಇಡ್ಲಿ ಖರೀದಿಸುವ ಮೂಲಕ ಎಚ್ಚರವಿರಲಿ.