Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ವಿವಿಧ ಕಾರ್ಯಕ್ರಮ ಮಾಡ್ತಾ ಇದೀವಿ- ಅಶ್ವಥ್ ನಾರಾಯಣ

webdunia
ಸೋಮವಾರ, 16 ಜನವರಿ 2023 (13:55 IST)
ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ  ನಡೆಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಯಣ್  ಬಿಜೆಪಿಯ ಮೋತ್ತೊಂದು ಸುತ್ತಿನ ವಿಜಯ ಸಂಕಲ್ಪ ಅಭಿಯಾನ ಯಶಸ್ವಿಯಾದ ಬೆನ್ನಲ್ಲೇ ಕೇಸರಿ ಪಡೆ ಮತ್ತೊಂದು ಸುತ್ತಿನ ಅಭಿಯಾನ ಹಮ್ಮಿಕೊಂಡಿದೆ.ಮತ್ತೊಮ್ಮೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಆಗಮಿಸಲಿದ್ದಾರೆ ಎಂದು ಹೇಳಿದ್ರು.
 
 ಅಲ್ಲದೆ ಬಿಜೆಪಿಯ ಬೂತ್ ವಿಜಯ ಅಭಿಯನ ಪ್ರಾರಂಭ ಮಾಡಿ ಯಶಸ್ವಿಯಾಗಿದ್ದೇವೆ.58 ಸಾವಿರ ಬೂತ್ ಗಳಲ್ಲಿ ಕಾರ್ಯಕ್ರಮ ನಡೆದಿದೆ.51 ಸಾವಿರ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.ಬೇರು ಮಟ್ಟದಲ್ಲಿ  ಸಂಘಟನೆ ಕಟ್ಟೋದು ಯಶಸ್ವಿಯಾಗಿದೆ.
 
ವಿಜಯ ಸಂಕಲ್ಪ ಅಭಿಯಾನ ಜನವರಿ 21 ರಿಂದ ಜನವರಿ 29 ರ ವರಿಗೆ ನಡೆಯಲಿದೆ.10 ವಿಭಾಗದಲ್ಲಿ ಸಭೆ ಆಗಿದೆ, 31 ಜಿಲ್ಲೆ ಸಭೆ ಆಗಿದೆ, 312 ಮಂಡಲದಲ್ಲಿ ಸಭೆ ಆಗಿದೆ.ಮುಂದಿನ ಸಭೆ ಮಹಾ ಶಕ್ತಿ ಕೇಂದ್ರದಲ್ಲಿ ನಡೆಯುತ್ತವೆ.ರಾಷ್ಟ್ರಿಯ ಅಧ್ಯಕ್ಷ ಜೆಪಿ ನಡ್ಡ  ಅವರ ವಿಜಯಪುರದ ಸಿಂದಗಿ ಯಲ್ಲಿ ಚಾಲನೆ ನೀಡಲಿದ್ದಾರೆ.ಜೆ ಪಿ ನಡ್ಡ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತದೆ .ಕಾರ್ಯಕ್ರಮ ದಲ್ಲಿ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ನಳಿನ್ ಕುಮಾರ್ ಕೂಡ ಚಾಲನೆ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ಕರ ಪತ್ರ ಗಳನ್ನು ವಿತರಿಸುವುದು.ಬಿಜೆಪಯ ಸಾಧನೆಯನ್ನು 2. ಕೋಟಿಗೂ ಹೆಚ್ಚು ಮತದಾರರಿಗೆ  ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆ ತಿಳಿಸುವುದು.ಪ್ರತಿಯೊಂದು ಮನೆ ವಾಹನ ಬೈಕ್ ಕಾರ್  ಮೇಲೆ ಸ್ಟಿಕರ್ ಅಚ್ಚುವುದುರಾಜ್ಯ ಸರ್ಕಾರದ ಸಾಧನೆಯನ್ನು ಗೋಡೆ ಮೇಲೆ ಬರೆಯುವುದು 58 ಸಾವಿರ ಬೂತ್ ಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ.
 
31 ಜಿಲ್ಲೆಯಲ್ಲಿ ಆ ಜಿಲ್ಲೆಗೆ ಸಂಬಂಧ ಪಟ್ಟ ಕ್ಷೇತ್ರ ದಲ್ಲಿ ಶಾಸಕರು, ಸಂಸದರು, ಸಚಿವರು ಚಾಲನೆ ನೀಡ್ತಾರೆ.ಪಕ್ಷವನ್ನು ಬಲಿಷ್ಠವಾಗಿ ಕಟ್ಟೋಕೆ ಈ ಕಾರ್ಯಕ್ರಮ ಮಾಡ್ತಾ ಇದೀವಿ.ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ವಿವಿಧ ಕಾರ್ಯಕ್ರಮ ಮಾಡ್ತಾ ಇದೀವಿ.ಜನವರಿ 29 ಕ್ಕೆ ಮನ್ ಕಿಬಾತ್ ಕಾರ್ಯಕ್ರಮ ಮಾಡ್ತಾ ಇದೀವಿ.90% ಹೆಚ್ಚಿನ ಬೂತ್ ನಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಮಾಡ್ತಾ ಇದೀವಿ.ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಕರ ಪತ್ರದ ಮೂಲಕ ನೀಡಿದ್ದೇವೆ.ಕನಿಷ್ಠ 3 ಕೋಟಿ ಅಷ್ಟು ಕರ ಪತ್ರಗಳನ್ನು ಬೈಕ್ ಮತ್ತು ಇತರೆ ವಾಹನಗಳಿಗೆ ಅಂಟಿಸುವ ಕಾರ್ಯ ಆಗುತ್ತೆ ಎಂದು ಸಚಿವ ಅಶ್ವಥ್ ನಾರಯಣ ಹೇಳಿದ್ರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ