Select Your Language

Notifications

webdunia
webdunia
webdunia
webdunia

ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು : ಅಶ್ವಥ್ ನಾರಾಯಣ

ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು : ಅಶ್ವಥ್ ನಾರಾಯಣ
ಬೆಂಗಳೂರು , ಭಾನುವಾರ, 27 ನವೆಂಬರ್ 2022 (09:42 IST)
ಬೆಂಗಳೂರು : ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಿದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ.

ಮಣ್ಣಿನ ಮಕ್ಕಳು ಸ್ವತಃ ಶ್ರಮಜೀವಿಗಳು, ಉದ್ಯಮಶೀಲತೆಯ ಸ್ಫೂರ್ತಿ ಹೊಂದಿರುವವರು ಎಂದು ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.

ಪ್ರಾದೇಶಿಕ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ರಚಿಸಲಾದ ವೇದಿಕೆ “ಫರ್ಸ್ಟ್ ಸರ್ಕಲ್” ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಬಿಸಿನೆಸ್ ನೆಟ್ವರ್ಕಿಂಗ್ ಎಕ್ಸ್ಪೋ ಹಾಗೂ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಬೆಂಗಳೂರು ಇಡೀ ವಿಶ್ವಕ್ಕೆ ಆವಿಷ್ಕಾರದ ನಾಡು ಎನಿಸಿದೆ. ಎಲ್ಲಾ ಕ್ಷೇತ್ರದಲ್ಲೂ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಪುಣ್ಯಭೂಮಿ, ಭರವಸೆಯ ನಾಡಿನಲ್ಲಿ ನಾವು ಇದ್ದೇವೆ. ಇಂತಹ ಅವಕಾಶಗಳ ನಾಡಿನ ಶಕ್ತಿಯನ್ನು ಅರಿಯಬೇಕು. ಉದ್ಯಮಿಗಳಾಗಿ ಯಶಸ್ಸು ಗಳಿಸಿದ ನಂತರ ಅದನ್ನು ಸಮಾಜಕ್ಕೆ ವಾಪಸ್ ಕೊಡಬೇಕು.

ಹೊಸ ಐಡಿಯಾಗಳನ್ನು ಹೊಂದಿರುವ ಉದ್ಯಮಿಗಳನ್ನು ಸದಾ ನಾನು ಬೆಂಬಲಿಸುತ್ತೇನೆ. ನನ್ನ ಕರ್ತವ್ಯವೇ ಅವರನ್ನು ಸನ್ನದ್ಧರನ್ನಾಗಿಸುವುದು, ಅವರಿಗೆ ಸೌಲಭ್ಯ ಒದಗಿಸುವುದು. ನಮ್ಮ ಜೊತೆಯಲ್ಲಿರುವ ನೂರಾರು ಮಂದಿ ಇಂದು ಉದ್ಯಮಿಗಳಾಗಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಬೆಂಬಲವಷ್ಟೇ. ನಾವು ಉದ್ಯಮಿಗಳಾಗಲು ಬಯಸುವ ಎಲ್ಲರಿಗೂ ಬೆಂಬಲ, ಸಹಕಾರ ನೀಡುತ್ತೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡ್ತೀವಿ : ಬೊಮ್ಮಾಯಿ