Select Your Language

Notifications

webdunia
webdunia
webdunia
webdunia

ಅವರ ದೊಡ್ಡತನಕ್ಕೆ ನಾನು ಕೈಮುಗಿತ್ತೀನಿ, ಕಾಂಗ್ರೆಸ್ ಬಿಗ್ ಆಫರ್ ಬಗ್ಗೆ ಶ್ರೀರಾಮುಲು ಶಾಕಿಂಗ್ ಹೇಳಿಕೆ

EX Minister SriRamulu, DCM DK Shivkumar, EX Minister Janardan Reddy

Sampriya

ಬಳ್ಳಾರಿ , ಶುಕ್ರವಾರ, 24 ಜನವರಿ 2025 (16:15 IST)
ಬಳ್ಳಾರಿ: ಕಾಂಗ್ರೆಸ್ ಆಫರ್ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಅವರು ಇಂದು ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.  

ರಾಜ್ಯ ರಾಜಕಾರಣದಲ್ಲಿ ಒಂದು ಕಾಲದ ಆಪ್ತ ಗೆಳೆಯರಾಗಿದ್ದ ಮಾಜಿ ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ನಡುವಿನ ಕಿತ್ತಾಟ ಇದೀಗ ತಾರಕಕ್ಕೇರಿದೆ.  ಈ ಸಂಬಂಧ ಜನಾರ್ಧನ ರೆಡ್ಡಿ ಪ್ರತಿಕ್ರಿಯಿಸಿ, ಸತೀಶ್ ಜಾರಕಿಹೊಳಿಯನ್ನು ಮುಗಿಸಲು ಡಿಕೆಶಿ ಪ್ಯಾನ್‌ ಹಾಗೇ ಶ್ರೀರಾಮುಲು ನಡೆದುಕೊಳ್ಳುತ್ತಿದ್ದಾರೆ. ಶ್ರೀರಾಮುಲು ಇದೆಲ್ಲ ಕಾಂಗ್ರೆಸ್ ಸೇರುವ ಲಕ್ಷಣ ಎಂದು ಬಾಂಬ್ ಸಿಡಿಸಿದ್ದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಬರಲು ಶ್ರೀರಾಮುಲು ಸಿದ್ದರಿದ್ದರು ಎಂಬ ಚೆಲುವರಾಯ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ನನ್ನಲ್ಲಿ ಯಾವುದೇ ಅಧಿಕಾರ ಇಲ್ಲದಿದ್ದರೂ ನನ್ನನ್ನು ಆಡಳಿತದಲ್ಲಿದ್ದವರು ಕರೆಯುತ್ತಿದ್ದಾರೆ ಎಂದರೆ ಅವರಿಗೆ ನನ್ನ ಮೇಲಿರುವ ಗೌರವ.  ಒಳ್ಳೆಯವರಿದ್ದರೆ ಅಷ್ಟೇ ಕರೆಯುತ್ತಾರೆ.  ನನ್ನ ವ್ಯಕ್ತಿತ್ವವನ್ನು ನೋಡಿ ಅವರು ನನನ್ನೂ ಕರೆದೂ ಇರಬಹುದು. ಅವರ ದೊಡ್ಡತನಕ್ಕೆ ನಾನು ಕೈಮುಗಿತ್ತೀನಿ ಎಂದರು.

ರಾಜಕೀಯವನ್ನು ಹೊರತು ಪಡಿಸಿ ಅವರು ಪ್ರೀತಿಯಿಂದ ಮಾತನಾಡಿದ್ದಾರೆ.  ಆಫರ್ ಬಂದಿರ್ಬೋದು, ಬಾರದೆ ಇರ್ಲೋಬೋದು. ಆದರೆ ನಿರ್ಧಾರ ನನ್ನದಾಗಿರುತ್ತದೆ. ಬಿಜೆಪಿ ನನ್ನ ತಾಯಿ ಇದ್ದ ಹಾಗೇ. ಅದರಲ್ಲಿ ಸೇವಕನಾಗಿ ಕೆಲಸ ಮಾಡಬೇಕೆಂಬುದು ನನ್ನ ನಿರ್ಧಾರ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಾಳ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ: ಮೂವರು ದುರ್ಮರಣ