Publish Date: Fri, 24 Jan 2025 (15:27 IST)
Updated Date: Fri, 24 Jan 2025 (15:30 IST)
ವಿಜಯಪುರ: ಇಲ್ಲಿನ ವಿಜಾಪುರ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರ ಕನ್ನಾಳ ಕ್ರಾಸ್ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ವಿಜಯಪುರ ನಗರದ ಅಭಿಷೇಕ್ ಸಾವಂತ್(23), ವಿಜಯಕುಮಾರ್ ಔರಂಗಾಬಾದ್ (24) ರಾಜು ಬಿರಾದಾರಾ(23) ಎಂದು ಗುರುತಿಸಲಾಗಿದೆ.
ಐವರು ಕಾಲಿನಲ್ಲಿ ಸೋಲಾಪುರದಿಂದ ವಿಜಯಪುರಕ್ಕು ವಾಪಾಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.