Select Your Language

Notifications

webdunia
webdunia
webdunia
webdunia

ಚಾಮುಂಡೇಶ್ವರಿ ಸೋಲು ಮರೆಯಲು ಆಗುತ್ತಿಲ್ಲ: ಸಿದ್ದರಾಮಯ್ಯ

ಚಾಮುಂಡೇಶ್ವರಿ ಸೋಲು ಮರೆಯಲು ಆಗುತ್ತಿಲ್ಲ: ಸಿದ್ದರಾಮಯ್ಯ
bengaluru , ಮಂಗಳವಾರ, 13 ಜುಲೈ 2021 (14:57 IST)
5 ಬಾರಿ ಗೆದ್ದಿರುವ ನನ್ನ ಊರು, ತಾಲೂಕು ಹಾಗೂ ನನ್ನ ಕ್ಷೇತ್ರದ ಜನರೇ ನನ್ನನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿದರು. ಮತ್ತೊಂದು ಚುನಾವಣೆ ಬರುತ್ತಿದ್ದರೂ ಆ ಸೋಲು ಮರೆಯಲು ಆಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನೆನಪಿಸಿಕೊಂಡರು.
ಬಾದಾಮಿಯಲ್ಲಿ ಮಂಗಳವಾರ ಕಾ
ರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾದಾಮಿ ಜನ ಒಳ್ಳೆಯ ಜನ ಅಂತ ಇಲ್ಲಿ ನಿಂತುಕೊಂಡೆ, ನೀವು ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಋಣ ತೀರಸಬೇಕಲ್ಲ ಎಂದರು.
ನಾನು ವಿಪಕ್ಷ ನಾಯಕ ಆಗಿರುವುದರಿಂದ ಬಹಳ ಓಡಾಡಬೇಕಾಗುತ್ತೆ. ಹೀಗಾಗಿ ನಾನು ಪದೇ ಪದೇ ಬಾದಾಮಿಗೆ ಬರಲು ಆಗುವುದಿಲ್ಲ. ನಾನು ಸಿಎಂ ಆಗಿದ್ದಾಗ, ಏನಾದರೂ ನಾನು ಬಾದಾಮಿ ಶಾಸಕ ನಾನು ಆಗಿದ್ದಿದ್ದರೆ ನಿಮಗೆ ಬೇಕಾದ ಎಲ್ಲ ಅಭಿವೃದ್ಧಿ ಮಾಡಿ, ಎಲ್ಲ ವಿಕಾಸ ಮಾಡಿಕೊಡುತ್ತಿದ್ದೆ. ಏನೇ ಆದರೂ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ನಿಮ್ಮ ಋಣ ತೀರಿಸಲು ಆಗಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಷಹಾರದಿಂದ ಒಂದೇ ಕುಟುಂಬದ ಮೂವರು ಸಾವು