Publish Date: Mon, 16 May 2022 (14:36 IST)
Updated Date: Mon, 16 May 2022 (14:38 IST)
ನನಗೆ ಮುಸ್ಲಿಮರ ಓಟು ಬೇಡ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಸಾರ್ವಜನಿಕ ಸಮಾರಂಭದಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನನಗೆ ಮುಸ್ಲಿಮರ ಓಟು ಬೇಡ. ಹಿಂದುಗಳ ಓಟು ಬೇಕು ಎಂದಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನನಗೆ ಬ್ಯಾರಿಗಳ ಓಟು ಬೇಡ. ನಾನು ಅವರ ಓಟಿನಲ್ಲಿ ಗೆಲ್ಲಬೇಕಾಗಿಲ್ಲ. ಹಿಂದುಗಳ ಓಟು ಸಿಕ್ಕರೆ ಸಾಕು ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಮಾಡುತ್ತೇನೆ. ಆಗ ತಾಕತ್ತಿನಿಂದ ನನಗೆ ಮುಸ್ಲಿಮರ ಓಟ್ ಬೇಡ ಎಂದು ಹೇಳುತ್ತೇನೆ. ನನಗೆ ಕೇವಲ ಹಿಂದೂಗಳ ಓಟ್ ಅಷ್ಟೇ ಸಾಕು ಎಂದಿದ್ದಾರೆ.
ತಮ್ಮ ಹೇಳಿಕೆಗೆ ಕಾರಣವನ್ನೂ ನೀಡಿರುವ ಹರೀಶ್ ಪೂಂಜಾ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು. ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳ್ತೇನೆ ನನಗೆ ಮುಸ್ಲಿಮರ ಮತಗಳು ಬೇಡ ಎಂದು ಕಟುವಾಗಿ ನುಡಿದಿದ್ದಾರೆ.