Select Your Language

Notifications

webdunia
webdunia
webdunia
webdunia

ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ-ಹೆಚ್ ಡಿ ಕುಮಾರಸ್ವಾಮಿ

ಕುಮಾರಸ್ವಾಮಿ

geetha

bangalore , ಸೋಮವಾರ, 8 ಜನವರಿ 2024 (16:30 IST)
ಬೆಂಗಳೂರು-ಕೃಷಿ ಇಲಾಖೆ ಕಾರ್ಯಕ್ರಮಕ್ಕೆ ಬಂದವರು ನಮ್ಮ ಮನೆಗೆ ಬಂದಿದ್ದಾರೆ.ಇದೊಂದು ಸೌಹಾರ್ದತೆಯ ಭೇಟಿಯಾಗಿದೆ.ಕೊಬ್ಬರಿಗೆ ರಾಜ್ಯದಲ್ಲಿ ಇರುವ ಸಮಸ್ಯೆಗಳಿಂದ ರೈತರು ನಿರಾಸೆಯಲ್ಲಿದ್ದಾರೆ.ಕೇಂದ್ರದ ಪ್ರಧಾನಿಗಳ ಭೇಟಿ ಮಾಡಿದ ಸಂದರ್ಭದಲ್ಲಿ ೨೫೦₹ ಜಾಸ್ತಿ ಮಾಡುವ ತೀರ್ಮಾನಕ್ಕೆ ಕೇಳಿದ್ದೆವು.ಹಲವು ರೈತರ ಸಮಸ್ಯೆಗಳ ಬಗ್ಗೆ  ಚರ್ಚೆ ಮಾಡಿದ್ದೇವೆ.ಕಾಡುಗೊಲ್ಲ ಸಮಾಜದ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ.ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ.೨೮ ಕ್ಕೆ ೨೮ ಸ್ಥಾನವನ್ನು ಮೈತ್ರಿ ಹಿನ್ನೆಲೆಯಲ್ಲಿ ಗೆಲ್ಲಬೇಕು ಎಂಬುದಷ್ಟೇ ನಮ್ಮ ಯೋಚನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
 
ಈಗ ಕೇಂದ್ರದಲ್ಲಿ ಮಂತ್ರಿ ಆಗಿ ಏನು ಮಾಡ್ತೀರಿ?ಮಾಧ್ಯಮ ಗಳಲ್ಲೇ ದೊಡ್ಡ ಸುದ್ದಿಯಾಗಿದೆ.ಕೋಡ್ ಆಫ್ ಕಂಡಕ್ಟ್ ಬಂದರೆ ಕೆಲಸ ಮಾಡುವುದಕ್ಕಾಗುತ್ತದಾ?ಈಗ ಕೇಂದ್ರದ ಮಂತ್ರಿ ಆಗಿ ಏನು ಮಾಡುವುದು?ನಾನಂತೂ ಆ ಬಗ್ಗೆ ಯೋಚನೆ ಮಾಡಿಲ್ಲ ಮಾಹಿತಿಯೂ ಇಲ್ಲ.ನಮ್ಮಗೆ ಕಾಂಗ್ರೆಸ್ ನಾಯಕರ ದುರಹಂಕಾರ ತಡೆಯಬೇಕಷ್ಟೇ ,ಪಾಪ ಜೆಡಿಎಸ್ ಮುಗಿಸುವುದಷ್ಟೇ ಇಬ್ಬರು ನಾಯಕರ ಉದ್ದೇಶ ತಾನೇ,ವಿರೋಧಿಗಳಿಗೂ ಸಹ ದೇವೇಗೌಡ ಎಂದೂ ಶಾಪ ಕೊಟ್ಟವರಲ್ಲ.ನಾಡಿನ ಜನತೆ ಅವರ ನಡವಳಿಕೆ ಸಮಾಪ್ತಿ ಮಾಡ್ತಾರೆ ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ.

ಈಗಿನ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ೧೩೫ ವರ್ಷಗಳ ಇತಿಹಾಸದ ಪಕ್ಷ ಅಂದಿದ್ದಾರಲ್ಲ.ಇವರ ಈಗಿನ ಇತಿಹಾಸ ಏನು?ಗಾಂಧಿ ಕಟ್ಟಿದ ಕಾಂಗ್ರೆಸ್ ನ ಆಗಿನ ಇತಿಹಾಸ ಬೇರೆ,ಈಸ್ಟ್ ಇಂಡಿಯಾ ಕಂಪನಿ ತರ ದರೋಡೆಯನ್ನು ಈಗಿನ ಕಾಂಗ್ರೆಸ್ ಮುಂದುವರಿಸಿಕೊಂಡು ಹೋಗಿದ್ದಾರೆ.ಹಿಂದಿನ ಕಾಂಗ್ರೆಸ್ ರಾಜಕಾರಣಿಗಳು ಆಸ್ತಿ ಮಾರಿ ಪಕ್ಷ ದೇಶ ಕಟ್ಟಿದ್ದಾರೆ ಆದರೆ ಈಗಿನವರು ಈಸ್ಡ್ ಇಂಡಿಯಾ ಕಂಪನಿ ಲೂಟಿ ಮಾಡಿದ ಹಾಗೆ ಲೂಟಿ ಮುಂದುವರಿಸಿದ್ದಾರೆ.

ಮೈತ್ರಿ ಹಿನ್ನೆಲೆಯಲ್ಲಿ ಹಲವಾರು ನಾಯಕರು ಭೇಟಿ ಆಗ್ತಿದ್ದಾರೆ.ಸಿಟಿ ರವಿ ಸೇರಿ ಹಲವರು ಸೌಹಾರ್ದತೆಯಿಂದ ಕೆಲಸ ಮಾಡಬೇಕು ಅಂತ ಭೇಟಿ ಆಗಿದ್ದಾರೆ.ಅಗತ್ಯ ಬಿದ್ದರೆ ಬಿಜೆಪಿಯಲ್ಲಿ ಮುಂದುವರಿದರೆ ಸುಮಲತಾ ಅವರನ್ನೂ ಭೇಟಿ ಆಗ್ತೇನೆ.ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನೇ ಆಲೋಚನೆ ಮಾಡಿಲ್ಲ.ಕೆಲವರು ತುಮಕೂರು ಅಂತಿದ್ದೀರಿ ಮಂಡ್ಯ ಅಂತೀರಾ?ಬೆಂಗಳೂರು ಗ್ರಾಮಾಂತರ ದಲ್ಲಿ ನಾನು ಸ್ಪರ್ಧೆ ಮಾಡಬಹುದು ಅಂತ ಪಾಪ ಕೆಲವರು ನಿದ್ದೆಯೇ ಮಾಡ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಿಂದ ರಾಮ ಜನ್ಮಭೂಮಿ ಅಯೋಧ್ಯಯತ್ತ ಹೊರಟ ಅಳಿಲಿನ‌ ಪುತ್ಥಳಿ