Publish Date: Sun, 05 Mar 2023 (19:04 IST)
Updated Date: Sun, 05 Mar 2023 (19:07 IST)
ರಾಮನಗರದಲ್ಲಿ ಅಶೋಕ್ ಮತ್ತು ಅಶ್ವತ್ಥ ನಾರಾಯಣ್ ಹೇಳಿಕೆ ವಿಚಾರವಾಗಿ ಇಂದು ಮಾತನಾಡಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಚಿವರ ವಿರುದ್ದ ಹರಿಹಾಯ್ದಿದ್ದಾರೆ. ರಾಮನಗರದಲ್ಲಿ ಜನರು ನನ್ನನ್ನು ಬೆಳೆಸಿದ್ದಾರೆ. ತಾಯಿ ಮಗನ ಸಂಬಂಧ ಇದೆ,ರಾಮನಗರದ ಜನತೆ ಹಣದ ದಾಹಕ್ಕೆ ಯಾವುದೇ ಕಾರಣಕ್ಕೆ ಬಲಿಯಾಗಲ್ಲ,ಸಾಮ್ರಾಟ್ ಅಶೋಕ್ ರವರೆ ಮುಂದಿನ ಚುನಾವಣೆಯಲ್ಲಿ ಮನೆಗೆ ಹೋಗಲು ರೆಡಿಯಾಗಿ.ಬಿಜೆಪಿ ಈ ರಾಜ್ಯದಲ್ಲಿ ಮತ್ತೆ ತಲೆ ಎತ್ತಲು ಸಾಧ್ಯವಿಲ್ಲ, ಕುಮಾರಸ್ವಾಮುಯಿಂದ ಜೀವ ಪಡೆದಿದ್ದೀರಿ ಕುಮಾರಸ್ವಾಮಿಯಿಂದಲೇ ಅತಂತ್ರರಾಗುತ್ತೀರಿ.ಪಾಪದ ಹಣ ತಂದು ಒಂದು ಮತಕ್ಕೆ 5 ಸಾವಿರ ಕೊಟ್ಟು ಗೆಲ್ಲುತ್ತೇವೆ ಅಂದುಕೊಂಡಿದ್ರೆ ಅದು ನಿಮ್ಮ ಭ್ರಮೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.