Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಕಾಂಗ್ರೆಸ್  ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ
bangalore , ಶುಕ್ರವಾರ, 3 ನವೆಂಬರ್ 2023 (14:01 IST)
3ದಿನ ಪ್ರವಾಸ ಮುಗಿಸಿ ದುಬೈನಿಂದ  ಬೆಂಗಳೂರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಪಸ್ಸಾಗಿದ್ದಾರೆ.ಐದು ವರ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.ಅವರ ಕಾಂಗ್ರೆಸ್ ಸಮಸ್ಯೆಗಳ ಬಗ್ಗೆ ನಾನೇನು ಉತ್ತರ ನೀಡಲಿ.ಕಾಂಗ್ರೆಸ್ ಐದು ವರ್ಷ ಪೂರೈಸುತ್ತಾ ಇಲ್ಲವಾ ಎಂದು ಕಾಂಗ್ರೆಸ್ಸಿಗರನ್ನ ಕೇಳಿ.ಸರ್ಕಾರ ಬೀಳುವ, ಬೀಳಿಸುವ ವಿಚಾರದ ಚರ್ಚೆ ಯಾರಿಂದ ನಡೆಯುತ್ತಿದೆ ಎಂದು ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಇನ್ನೂ ಯೋಗೇಶ್ವರ್ ಮಗನ ವಿಚಾರವಾಗಿ ಲಂಡನ್ ಗೆ ಹೋಗಿದ್ದಾರೆ,ನಾನು ನನ್ನ ಫ್ಯಾಮಿಲಿ ಜೊತೆ ದುಬೈ ಪ್ರಸಾವ ಮುಗಿಸಿ ಬಂದಿದ್ದೇನೆ.ಕಾಂಗ್ರಸ್ ಸಮಸ್ಯೆ‌ ನೀಗಿಸಲು ಕೇಂದ್ರದಿಂದ ಬಂದಿದ್ರಲ್ಲ ಸುರ್ಜೆವಾಲ ಅವರನ್ನ ಕೇಳಿ.ಸೂಟ್ ಕೇಸ್ ಹೊತ್ಕೊಂಡು ಹೋಗೋಕೆ ಬಂದಿದ್ರೊ,,!?ಕಲೆಕ್ಷನ್ ಜೋರಾಗಿತ್ತು ತಮ್ಮ ಪಾಲಿನ ಹಣ ಹೊತ್ಕೊಂಡು ಹೋಗೋಕೆ ಬಂದ್ರದ್ರು ಅನ್ಸುತ್ತೆ.ಹಣ ಮತ್ತು ಹಣಕಾಸಿನ  ವಿಚಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲರನ್ನ ಕೇಳಿ.ರಾಜಕೀಯ ಅನಿಶ್ಚಿತೆಯಿಂದ ಯಾವಾಗ ಏನಾಗುತ್ತೊ‌ ಗೊತ್ತಿಲ್ಲ .ಕಾಂಗ್ರೆಸ್ ಜಗಳ ಮತ್ತು ಅವರ ಅಸಮಾಧಾನವನ್ನು ಅವರ ಬಳಿಯೇ ಕೇಳಿ ಎಂದು ನಮಗೇನು ಗೊತ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಸಂಕಷ್ಟಕ್ಕಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ವಿಫಲ