Publish Date: Fri, 27 Oct 2023 (14:12 IST)
Updated Date: Fri, 27 Oct 2023 (16:15 IST)
ಮಾಜಿ ಸಿಎಂ ಕುಮಾರಸ್ವಾಮಿಗೆ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಡಿ.ವಿ.ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಬೇಕು. ಆದರೆ ಅವರಿಗೆ ಬೆಂಬಲದ ಬಗ್ಗೆ ಇನ್ನೂ ಏನು ತೀರ್ಮಾನ ಆಗಿಲ್ಲ.
ಮೈತ್ರಿ ಕುರಿತು ಹೋರಾಟಗಳ ಬಗ್ಗೆ ನಮಗೆ ಯಾವುದೇ ಸಂದೇಶ ಬಂದಿಲ್ಲ. ಯಾವ ರೀತಿ ಹೋರಾಟ ಎಂಬುದರ ಬಗ್ಗೆಯೂ ನಮ್ಮ ಜೊತೆ ಚರ್ಚೆ ಮಾಡಿಲ್ಲ ಎಂದ್ರು.