Select Your Language

Notifications

webdunia
webdunia
webdunia
webdunia

35 ಕೋಟಿ ತಗೊಂಡಿದ್ದರೆ ತನಿಖೆ ಆಗಲಿ: ಕೋಡಿಹಳ್ಳಿ ಚಂದ್ರಶೇಖರ್

kodihalli chandrashekar bengaluru ಬೆಂಗಳೂರು ಕೋಡಿಹಳ್ಳಿ ಚಂದ್ರಶೇಖರ್
bengaluru , ಶನಿವಾರ, 28 ಮೇ 2022 (17:04 IST)

ಸಾರಿಗೆ ನೌಕರರ ಪ್ರತಿಭಟನೆ ಹತ್ತಿಕ್ಕಲು ನಾನು 35 ಕೋಟಿ ರೂ. ಲಂಚ ಪಡೆದಿದ್ದೇನೆ ಎಂದು ಮಾಧ್ಯಮವೊಂದು ಬಿಂಬಿಸುವ ಪ್ರಯತ್ನ ಮಾಡಿದೆ. ಆದರೆ ನಾನು ಹಣವನ್ನೇ ಪಡೆಯದೇ ಹೇಗೆ ಭ್ರಷ್ಟ ಆಗುತ್ತೇನೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಸುದ್ದಿ ಸಂಸ್ಥೆ ನನ್ನ ಜೊತೆಗೆ 8 ತಿಂಗಳ ಕಾಲ ಇದ್ದು, ಈ ವೀಡಿಯೋ ಮಾಡಿದೆ. ಆದರೆ ಅವರೇ ಹೇಳುವಂತೆ ಮಾತನಾಡಿದ್ದೇವೆ. ಆದರೆ ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದರು.

ಪ್ರತಿಭಟನೆ ನಿಲ್ಲಿಸಲು ನಾನು ಸಾರಿಗೆ ಸಂಸ್ಥೆಯ ಯಾವುದೇ ಅಧಿಕಾರಿ ಅಥವಾ ಸಚಿವರನ್ನು ಖಾಸಗಿಯಾಗಿ ಭೇಟಿಯಾಗಿಲ್ಲ. ಅವರ ಬಳಿ ಹಣದ ಬೇಡಿಕೆ ಇಟ್ಟಿಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಒಂದೂವರೆ ವರ್ಷದ ಹಿಂದೆ 8 ತಿಂಗಳು ನನ್ನ ಜೊತೆಗಿದ್ದು ಮಾಡಿದ ವೀಡಿಯೋವನ್ನು ಈಗ ಬಿಡುಗಡೆ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ನಾನು ಹಣ ಪಡೆದಿದ್ದೇನ ಎಂಬ ಆರೋಪ ಕುರಿತು ಮುಖ್ಯಮಂತ್ರಿಗಳು ಕೂಡಲೇ ತನಿಖೆ ನಡೆಸಬೇಕು. ನನ್ನ ಎಲ್ಲಾ ಬ್ಯಾಂಕ್‌ ಖಾತೆಗಳನ್ನು ಜಫ್ತಿ ಮಾಡಲಿ ಬೇಕಾದರೆ ೮ ತಿಂಗಳ ಕಾಲ ಮಾತನಾಡಿದ ವೀಡಿಯೋವನ್ನು ತಮಗೆ ಬೇಕಾದಂತೆ ಎಡಿಟ್‌ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಉದ್ಯೋಗಿಗಳು ವಜಾ!?