Select Your Language

Notifications

webdunia
webdunia
webdunia
webdunia

ಭಾರತೀಯ ಉದ್ಯೋಗಿಗಳು ವಜಾ!?

ಭಾರತೀಯ ಉದ್ಯೋಗಿಗಳು ವಜಾ!?
ನವದೆಹಲಿ , ಶನಿವಾರ, 28 ಮೇ 2022 (15:13 IST)
ನವದೆಹಲಿ : ಸ್ಟಾರ್ಟ್ಅಪ್ ಕಂಪನಿಗಳು ನೀಡುವ ಲಾಭದಾಯಕ ಕೊಡುಗೆಗಳಿಂದ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಅದನ್ನು ಬೇಡ ಎನ್ನಲು ಸಾಧ್ಯವಿಲ್ಲ.

ಸಾಮೂಹಿಕ ವಜಾಗಳ ಹಿಂದಿನ ಮುಖ್ಯ ಕಾರಣ ಏನು ಎಂಬುದನ್ನು ಕಂಪನಿಗಳು ಸ್ಪಷ್ಟಪಡಿಸಿಲ್ಲ. ಆದರೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಎಲ್ಲಾ ಕಂಪನಿಗಳಲ್ಲಿ ಸಾಮಾನ್ಯವಾಗಿರುವ ಒಂದು ಕಾರಣವೆಂದರೆ, ಹೂಡಿಕೆಯ ಕೊರತೆ.

ಇದರೊಂದಿಗೆ ಹೆಚ್ಚಿನ ಸ್ಟಾರ್ಟ್ಅಪ್ ಕಂಪನಿಗಳು ಶಿಕ್ಷಣಕ್ಕೆ ಸಂಬಂಧಪಟ್ಟವುಗಳಾಗಿದ್ದು, ಲಾಕ್ಡೌನ್ ಮುಗಿದು ಶಾಲೆಗಳು ತೆರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿಯಲಾರಂಭಿಸಿದ್ದಾರೆ. 

ನಿಖರವಾದ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ ಓಲಾ 2022ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2,100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅನಕಾಡೆಮಿ 926, ವೇದಾಂತು 600, ಕಾರ್ಸ್ 24 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಹೊಸದಾಗಿ ಸ್ಥಾಪಿಸಲಾದ ಮೀಶೋ ತನ್ನ ಆದಾಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಾರಂಭವಾದ ಕೆಲವು ವರ್ಷಗಳಲ್ಲಿ ಕೇವಲ 150 ಉದ್ಯೋಗಿಗಳನ್ನು ಮಾತ್ರ ಕೈಬಿಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯಲ್ಲಿತ್ತು ಸಾಕಷ್ಟು ಮೌಲ್ಯದ ಕೊಕೇನ್!