Select Your Language

Notifications

webdunia
webdunia
webdunia
webdunia

ಪತ್ನಿ ವಾಕಿಂಗ್‌ ಹೋದಾಗ ಪೊಲೀಸ್‌ ಪೇದೆ ಆತ್ಮಹತ್ಯೆ

police constable mysore ಮೈಸೂರು ಪೊಲೀಸ್‌ ಕಾನ್ಸ್‌ ಟೇಬಲ್
bengaluru , ಶನಿವಾರ, 28 ಮೇ 2022 (14:36 IST)
ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ಸಮಯದಲ್ಲಿ ಪೊಲೀಸ್ ಪೇದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಜಲಪುರಿ ಪೊಲೀಸ್ ಕ್ವಾರ್ಟರ್ಸ್‌ ನಲ್ಲಿ ಶನಿವಾರ ಬೆಳಿಗ್ಗೆ ಪರಸಪ್ಪ ಕೊನ್ನೂರು (27) ನೇಣಿಗೆ ಶರಣಾಗಿದ್ದಾರೆ.
ಪರಸಪ್ಪ ಅವರಿಗೆ ಒಂದೂವರೆ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಇದೀಗ ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕ್ವಾಟ್ರಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಮೂಲದ ಪರಸಪ್ಪ ಅವರು ಮೈಸೂರಿನ ದೇವರಾಜ ಠಾಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು 2016 ನೇ ಬ್ಯಾಚ್ ನಲ್ಲಿ ಆಯ್ಕೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದು ಪ್ಯಾಕ್‌ ಸಿಗರೇಟು ಸೇದಿದ 15 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು!